...

5 views

ಹನಿಗವನ
ಈ ಏಕಾಂತಕೆ ನಿನ್ನ
ಪ್ರೀತಿಯ ಸಾಂಗತ್ಯ ಬೇಕು
ಈ ಬೇಸರದ ಬೇಸಿಗೆಗೆ
ನೀ ತಂಪೆರೆಯಬೇಕು
ನೋವು ತುಂಬಿದ ಎದೆಯಲಿ
ನಗುವಿನ ಸೋನೆ ಸುರಿಸು ಸಾಕು
ಮಾತು ಮರೆತ ಮೌನ ಓಡಿಸಿ
ಹಾಡು ಗುನುಗಿ ದುಗುಡ ನೀಗಬೇಕು
ಬರಡಾದ ಹೃದಯ ಬುವಿಯಲ್ಲಿ
ಹಸಿರು ಚಿಗುರು ಮೂಡಿಸು ಸಾಕು

೦೩೧೫ ಪಿಎಂ ೩೦೦೪೨೦೨೪
*ಅಮು ಭಾವಜೀವಿ ಮುಸ್ಟೂರು*