...

3 views

"ತಾರೆಗಳ ತೋಟದ ರಾಜಕುಮಾರ ಚಂದಿರ"
ತಾರೆಗಳ ತೋಟದ ರಾಜಕುಮಾರ ಚಂದಿರ
ನೀನೆಷ್ಟು ಸುಂದರ;ನಿನ್ನ ನಗುವೆಷ್ಟು ಮನೋಹರ
ಹಾಲಿನಲ್ಲೇ ಮಿಂದೆದ್ದ ನಿನ್ನ ಮೈಬಣ್ಣವನ್ನು
ನನಗೂ ಕೊಂಚ ಕೊಡುವೆಯಾ?
ಬೆಣ್ಣೆಯಂತೆ ನುಣುಪಾದ ನಿನ್ನ ಮುಖಾರವಿಂದದ ನುಣುಪನ್ನು ನನಗೂ ಸ್ವಲ್ಪ ಕೊಡುವೆಯಾ?
ಬೆಳದಿಂಗಳ ಚೆಲುವಲ್ಲಿ ನಸುಗುವ ನಿನ್ನ ಮುಗ್ದ ನಗುವನ್ನು ನನಗೂ ಚೂರು ಕೊಡುವೆಯಾ?
ಸ್ನಿಗ್ಧಸೌಂದರ್ಯ ತುಂಬಿದ ನಿನ್ನ ಪ್ರಶಾಂತ ವದನದ ನೆಮ್ಮದಿಯ ಅಮೃತವನ್ನು ವಸಿ ನನಗೂ ನೀಡುವೆಯಾ?
ಮತ್ತೆ ಮತ್ತೆ ನೋಡಬೇಕಿನಿಸುವ ನಿನ್ನಂದವನ್ನು ನಿನ್ನಂಗಳದಲ್ಲಿ ಕುಳಿತು ಜೋಕಾಲಿ ಕಟ್ಟಿಕೊಂಡು ಸವಿಯುವಾಸೆ.
ಆದರೇನು ಮಾಡಲಿ ನೀ ಭಾನು
ನಾ ಭುವಿ.ಭುವಿಯಲ್ಲಿರುವ ನನಗೆ
ನೀ ಕೈಗೆಟುಕದ ಮುಗಿಲ ಮಲ್ಲಿಗೆ.!