...

8 views

ಓ ಮುದ್ದು ಮನವೇ.. ❤️

ಓ ಮುದ್ದು ಮನವೇ... ❤️
ನನ್ನ ನಲ್ಮೆಯ ಸಿರಿಯ ನಿನರಿಯೇ,
ನಿನ್ನ ಪ್ರೇಮದ ಪರಿಯ ನಾನರಿಯೇ,
ವರ್ಣಿಸಲಾಗದ ಭಾವ ಸಾಗರದಲಿ
ಮಿಂದೆದ್ದ, ಮಂದಸ್ಮಿತ ಮಿತ ಭಾಷೆಯಲಿ
ಸೆಳೆದಿರುವ ಮೃದು ಹೃದಯಿ ಇವನು..!!

ಮಧುರ ಮಾತಿನ ದನಿಯ ಕೇಳುವ ತವಕ,
ಏನೆಂದು ಬಣ್ಣಿಸಲಿ ಅವನೊಲವ ಜಳಕ,
ಸವಿನುಡಿಯ ಕೇಳುತಿದ್ದರೆ ಮೈಯೆಲ್ಲಾ ಪುಳಕ,
ಮೌನದಿ ಇರುವನು ನನ್ನ ಧನ ಕನಕ..!!

ಕಡಲಾತ್ಮ ಸೆಳೆಯೊ ಸೆಳೆತ ಸ್ನೇಹದೊಲವು,
ತನ್ನಷ್ಟಕ್ಕೆ ಮನದಿ ನಗುತಿದ್ದ ಎಂಥಹ ಚೆಲುವು,
ಮಾತಿನ ಚಕಮಕಿಗೆ ಮರುಳಾಗಿತ್ತು ನನ್ನ ಮನವು,
ಅವನಿರುವಲ್ಲಿಗೆ ನಿತ್ಯ ಹೋಗುವೆ ಪ್ರೇಮದೊಲವು..!!

ಬೇರೆ ಏನೂ ಬೇಡ ಗೆಳೆಯ,
ನಿನ್ನ ಸ್ನೇಹ ಒಂದೇ ಸಾಕಿನ್ನು ಒಡೆಯ,
ಚೈತನ್ಯ ಚಿಲುಮೆ ಶಾಂತಿರೂಪಿ ಕಂಡು,
ಸಂಕ್ರಮಣದಿ ಬಂದ ಸೂರ್ಯನಂತೆ,
ಚೈತ್ರದ ಚಿಗುರಿನ ಹಸಿರೆಲೆಯಂತೆ,
ಹೃದಯದಿ ಟಿಸಿಲೊಡೆಯಿತು ಸ್ನೇಹದ ಉಸಿರಂತೆ..!!

ನಲಿವಿರಲಿ ಜೀವನದಲಿ -ಬಾಳ ತುಂಬ ಕನಸಿರಲಿ,
ಗುರಿಯಿರಲಿ ಬದುಕಿನಲಿ -ಸ್ಫೂರ್ತಿಯ ಚಿಲುಮೆ ಉಕ್ಕುತಿರಲಿ,
ಸ್ನೇಹದೊಲವು ಅಚ್ಚ ಹಸಿರಾಗಿರಲಿ -ಭವ ಬಂಧ ಒಂದಾಗಿರಲಿ,
ನಗುವು ಸದಾ ನಿಮ್ಮರಸಿ ಬರಲಿ -ನನ್ನ ನೆನಪು ನಿತ್ಯ ನೂತನ ಚೈತನ್ಯವಾಗಿರಲಿ..!!

ಮನವ ಕಲಕಿದ ಚೆಲುವ -ಒಲವ ಗೆಳೆಯ ಯಾರಿವನೆಂದು... ಯೋಚಿಸುವೆ..!
ಅನುರಾಗದ ಅರುಣಗೀತೆ ಹಾಡುತಿಹನೆಂದು
ಈ ಹೃದಯ ಹೇಳುತ್ತಿರುವೆ..!!
ಇಂತಿ ನಿಮ್ಮ ಪ್ರೀತಿಯ
❤️ಸ್ನೇಹಿ ಸುಮನ್ ❤️
#ಸುಮನ್ #writcopoem