...

8 views

ಬಾಳೊಂದು ಬಣ್ಣದ ಬಲ್ಬ್

ಬಾಳೊಂದು ಬಣ್ಣದ ಬಲ್ಬ್
ತಿರುಗ ಮುರುಗ ಮಾಡಿದರು
ಕಾಣದು ನಿನ್ನ ಪ್ರತಿಬಿಂಬ ಕಾರಣ ಇಲ್ಲ,
ಇದು ಕನ್ನಡಿಯಲ್ಲ ಮಂಕೆ.

ಬಾಳೆಂಬ ಬಣ್ಣದ ಬಲ್ಬ್
ಹೊಂದಿದೆ ಪ್ಲೆಸ್ ಮತ್ತು ಮೈನೆಸ್
ಕಂಡು ಕೊರಗಬೇಡ ನಿನ್ನ ವೀಕ್ನೆಸ್
ಯಾರಿಗೆ ಸಿಗೋದಿಲ್ಲ ಇಲ್ಲಿ ಸಕ್ಸೆಸ್.

ಬಣ್ಣದ ಬಲ್ಬ್ಗೆ ವಿದ್ಯುತ್ತಿನ ಅವಶ್ಯಕತೆ
ಓಡೊ ನದಿಗೆ ಸಾಗರದ ಅವಶ್ಯಕತೆ
ಹಸಿರು ಎಲೆಗೆ ಪತ್ರಹರಿತ್ತಿನ ಅವಶ್ಯಕತೆ
ಬಣ್ಣದ ಬದುಕಿಗೆ ವಿದ್ಯೆಯ ಅವಶ್ಯಕತೆ
ಇಲ್ಲಿ ಎಲ್ಲರಿಗೂ ಇದೆ ಎಲ್ಲರ ಅವಶ್ಯಕತೆ.

ಬಾಳೊಂದು ಬಣ್ಣದ ಬಲ್ಬ್
ಸುತ್ತಲೂ ಆವರಿಸಿದೆ ಗಾಜಿನ ಪದರ
ಬಣ್ಣವ ಮಿಂಚಿಸಲು ನಿತ್ಯಬರುವ ನೇಸರ
ಬಾಳೇಕೆ ಮಿಂಚುತ್ತಿಲ್ಲ ಭಗವಂತ ಎಂದರೆ
ಬಾಳೊಂದು ಬಣ್ಣದ ಬಲ್ಬ್ ಎಂದಾ.



© Shree(🔸🤗⭐🔹)