...

9 views

ಸೌಂದರ್ಯವಾ ನಾ ಕಂಡೇ
ಹೊಸದಿನ ತರುತು ಹೊಸ ಬೆಳಕ ಚಲ್ಲಿ ಜೀವರಾಶಿಗಳಿಗೆ ಚೇತನ ಚೈತನ್ಯ ನೀಡುತ
ಸಲಹುವ ರವಿತೇಜನಲಿ

ಬೀಸುವ ತಂಪಾದ ಗಾಳಿಯಲಿ
ಮಿಂಚು ಗುಡುಗಿನ ಮೊಡಗಳ ಆಟದಲಿ
ಧರೆಯ ಅಪ್ಪುವ ಮಳೆಯ ಮುತ್ತಿನ ಹನಿಗಳಲಿ

ಕತ್ತಲ ಓಡಿಸುವ ಹುಣ್ಣಿಮೆ ಚಂದ್ರನಲಿ
ಚಂದಿರನ ಒಂಟಿಮಾಡದೆ ಜೊತೆಗೂಡಿ
ಆಡುತ ನಗುವ ತಾರೆಯ ಬಳಗದಲಿ

ನಾಚುತ್ತಾ ಆಸೆಗಳ ಮುಚ್ಚಿಟ್ಟ ಮೊಗ್ಗಗಳಲಿ
ಅರಳಿ ನಲಿವ ಹೂವುಗಳಲಿ
ಹೂವ್ವ ಮುಡಿವ ಹೆಣ್ಣಿನಲಿ

ಕಿಡಿಯಾಗಿ ಹುಟ್ಟಿ ಆರತಿಯಾಗಿ ಬೆಳಗುತ್ತಾ
ದೇವತೆಗಳಿಗೆ ಅಯ್ಯುವನ್ನು ವೃದ್ಧಿಸುವ
ಹೊಮಕುಂಡದ ಅಗ್ನಿಯಲಿ

ಸಹನೆ ತಾಳ್ಮೆಯ ಅರ್ಥವ ಸಾರುತ
ಮೌನದ ಮಹಿಮೆಯ ಸಾರುತ
ನಿಶ್ಚಲವಾಗಿ ನಿಂತ ನೀಲಿಮೇಘದಲಿ

ಸಿಹಿಯಾದ ಹಣ್ಣುಗಳಲ್ಲಿ
ಹಣ್ಣಿನ ಮರ ನೆಡುವ ಮನುಜನಲ್ಲಿ
ಮರ ನೆಟ್ಟು ಹಸಿರ ಉಳಿಸ ಬೇಕೆಂಬ ಆಶಯದಲ್ಲಿ

ಗೆಲುವಿನ ಖುಷಿ ಕೊಡುವ ಸೊಲಲ್ಲಿ
ನಮ್ಮವರಿಗಾಗಿ ಬಿಟ್ಟು ಕೊಡುವ ಗೆಲುವಿನಲ್ಲಿ
ಗೆಲುವು ಸೊಲು ಚಿಂತಿ ಇಲ್ಲದೆ ಆಡುವ ಮಕ್ಕಳಲ್ಲಿ

ಹಸಿರಾದ ಬನದಲಿ ಬೆಟ್ಟ ಗುಡ್ಡಗಳಲ್ಲಿ
ಹಕ್ಕಿಯು ಎಣಿಯುವ ಸೊಗಸಿನ ಗೂಡಿನಲ್ಲಿ
ಹಕ್ಕಿಗಳ ಚಿಲಿಪಿಲಿಯಲ್ಲಿ

ತುಂಬಿ ಹರಿಯವ ಕೆರೆ ಬಾವಿಗಳಲ್ಲಿ
ನಿಲ್ಲದೆ ಓಡುವ ಕಾಲದ ಜೊತೆಯಲ್ಲಿ
ಸರೊವರ ಸೇರಲು ಕಾತುರದಿ ಓಡುವ ನದಿಯಲ್ಲಿ

ಸ್ವಾಭಿಮಾನದ ದುಡಿಮೆಯಲ್ಲಿ
ದುಡಿದು ಗಳಿಸಿದ ಅನ್ನದಲ್ಲಿ
ಹಸಿದವರಿಗೆ ನೀಡುವ ತನ್ನ ಪಾಲಿನ ಋಣದಲ್ಲಿ

___Rani3525
© All Rights Reserved
#poem #poetrylovers #nature #naturelovers