...

9 views

ಮನದಂಗಳ ಮೆರಗು..
ಅರಳಿದ ಹೂವಲಿ ದುಂಬಿಯ ಝೇಂಕಾರ
ಇನಿಯನ ಎದೆಯಲಿ ಪ್ರೀತಿಯ ಸಂಚಾರ
ನನ್ನೀ ಮನದ ಮುಗಿಲ ಹುಣ್ಣಿಮೆ ಚಂದಿರ
ಬಾಳಲಿ ಭರವಸೆ ಹೊತ್ತು ಬಂದ ಹಮ್ಮೀರ...

ಮನದಂಗಳದ ಮೆರಗು ನನ್ನ ರಾಜಕುಮಾರ
ಹೃದಯಂಗಳದ ಉಸಿರಿಗಿವನೇ ಸೂತ್ರಧಾರ
ಬದುಕನು ರಂಗೇರಿಸಿ ಸಿಂಗರಿಸಿದ ಕಲಾಕಾರ...