...

21 views

ಅವನು ಗೆಳೆಯನಲ್ಲ
ಕಾಣುವ ಕನಸಿಗೆ
ಕಂಗಳು ಅವನು
ಮಾಗಿದ ಮನಸ್ಸಿಗೆ
ನೆಮ್ಮದಿ ಅವನು
ಹಾರುವ ಆಸೆಗೆ
ರೆಕ್ಕೆಯು ಅವನು
ನೋವಿನ ಕಂಬನಿಗೆ
ಮಿಡಿಯುವವ ಅವನು
ತೀರದ ಆಸೆಗಳ
ಪೂರೈಸುವವ ಅವನು
ಅಳುವ ಮನಕೆ
ಔಷಧಿ ಅವನು
ಮನಸ್ಸಿನ ಮಾತುಗಳ
ಹೇಳುವ ಅವನು
ನನ್ನೆಲ್ಲಾ ನಂಬಿಕೆಯ
ಆಧಾರ ಅವನು