...

10 views

ಗಝಲ್
ಅಂತರದ ಕಂದಕವದು ಮನದಿ ಮೂಡಿಸಿದ ಭಾವವು ವಿರಹ
ನಟ್ಟಿರುಳಿನಲೂ ನಿದಿರೆಯ ತಡೆಹಿಡಿಯುತಿಹ ನೋವು ವಿರಹ

ತೋಳಿನಾಸರೆ ಬಯಸುತ ಕರಗಿದ ಜೀವಕೆ ಮತ್ತದೇ ಏಕಾಂತ
ಕದಪುಗಳನು ತೋಯಿಸುವ ಕಣ್ಣೀರಿನ ವ್ಯಾಖ್ಯಾನವು ವಿರಹ

ಯೋಗವನು ಹಳಿಯಿತು ಹೃದಯ ಜಾರಿದ ಭಾಗ್ಯವ ನೆನೆದು
ಕದವನು ತೆರೆದಿರಿಸಿ ನಡೆಸುವ ಕಲ್ಪನೆಯ ವಿಹರಣವು ವಿರಹ

ಕಲ್ಮಶವಿಲ್ಲದ ಪ್ರೀತಿಯ ಕನವರಿಕೆಯಲಿ ಕಳೆಯುತಿದೆ ದಿವಸ
ಕರವಿಡಿದು ನಡೆದ ನಿನ್ನೆಗಳ ನೆನೆದು ಅರಳಿದ ನಲಿವು ವಿರಹ

ಕಣ್ಗಳ ಸಮರಂಗದಿ ವಿಜಯವನು ಪಡೆದಿದ್ದವು ಬಯಕೆಗಳು
ಆಂತರ್ಯದಲಿ ಪಸರಿಸುತಿಹ ಹಿತಸ್ಪರ್ಶದ ಘಮವು ವಿರಹ

#ವಿಜಯ್_ಗಝಲ್
#ಗಝಲ್
#ಕನ್ನಡ_ಗಝಲ್
#kvprakashquotes