...

4 views

ಪ್ರಯಣವೆತ್ತ?
ಪಯಣವೆತ್ತ?
ರಚನೆ ;ಭೃಂಗಿಮಠ ಮಲ್ಲಿಕಾರ್ಜುನ.

ಎತ್ತಲೋ ಪಯಣ
ಸಾಗುತಿದೆ
ನೆತ್ತಿಯ ಮೇಲೆ ಕೋರೋನಾ ಕೋವಿಡ್ ಕತ್ತೆಯು ಜೋತಾಡುವಾಗ
ಯಾರಿಗೆ ಹೇಗೆ ಯಾರ ಜೀವ ಕತ್ತರಿಸುತ್ತದೋ
ಗೊತ್ತಾಗದೆ

ಕಾಲಮಾನದ ಸೂಕ್ಷ್ಮತೆ
ಅರಿಯದ ಜನ ಮನ
ಲೆಕ್ಕವಿಲ್ಲದಷ್ಟು ಬೀದಿಗಿಳಿದು
ಅಲೆದಾಡುತ್ತಲಿದ್ದಾರೆ
ಮತ್ತದೇ ಕೊರೋನಾ ಎರಡನೇ ಅಲೆ ಅವರಿಗೆ
ಬೆಚ್ಚಿಬೀಳಿಸಿದೆ

ಘಟ್ಟಿಯಾದ ಹೃದತಗಳಂತೂ
ಅಡಲೊಡೆಯುತ್ತಿವೆ
ಸುರಕ್ಷತೆಯ ಬಯಸಿ
ಪಂಜರದ ಗೂಡು ಹಕ್ಕಿಯಾಗಿ
ಕಕ್ಕಾಬಿಕ್ಕಿಯಾಗಿ ಕೂತಲ್ಲೇ ಕುಳಿತು ಬೆಳಕು ನಿರೀಕ್ಷಿಸಿದರೂ ಭಯವೇ ಆವರಿಸಿದೆ

ಲಾಕ್ಡೌನ್ ನಡುವೆಯೂ
ಹೆಣಗಳ ರಾಸಿ ಸಾಗುತ್ತಿವೆ
ರೆಮಿ...ಸಿವಿ ಚುಚ್ಚುಮದ್ದು
೪೦ ಸಾವಿರ ರೋ ಕಾಳ ಸಂತೆಯಲಿ ಪಡಿ ಇಲ್ಲವೇ ಮಡಿ ವಾತವರಣದ ಪಯಣಕೆ
ಜನಮನ ತತ್ತರಿಸಿದೆ

ಬಡವ ಬಲ್ಲಿದರ ಬದುಕು ನರಕಯಾತನೆಯಾಗಿದೆ
ನಿರ್ಲಕ್ಷಿತ ಬಡವ ಮದ್ಯಮ ಸಿರಿವಂತರ ಮನೆಗಳೂ
ಮಸಣವಾಗುತಿವೆ ಬದುಕು
ಹಸನಾಗಬೇಕಿದೆ

ಕೆಟ್ಟ ವಾತವರಣ
ಹುಸಿ ಬಿಟ್ಟು
ಮತ್ತೆ ಕೃಷಿಗೆ ಮಾರು ಹೋಗುವ ಪಯಣದೆಡೆ
ಹಳ್ಳಿಗಳತ್ತ ಮನ ಹೊರಟಿದೆ
ಬಂದವರೆಷ್ಟೋ ಹೋದವರೆಷ್ಟೋ
ಲೆಕ್ಕವಿಲ್ಲದಾಗಿದೆ

ವೈದ್ಯಲೋಕದ ನಡೆ ಈಗ ನಂಬಿಕೆ ಬದಲಿಸುತ್ತಿದೆ
ಹಣ ವಸೂಲಿ ಪಿಸಾಸು ಎನಿಸುತಿದೆ
ಬರುವಾಗ ಬೆತ್ತಲೆ
ಹೋಗುವಾಗ ಕತ್ತಲೇ
ಬದುಕಿನ ಕೊನೆಯ ಪಯಣಕ್ಕೇನೂ
ಒಯ್ಯುವುದಿಲ್ಲ ನೆನಪಿಸಬೇಕೆನಿಸಿದೆ

ತತ್ವ ಪದಗಳು ತಿಳಿಸಿ
ತತ್ವದಿ ನಡೆಯುವುದು ರೂಢಿಸಿ
ಗತಕಾಲದ ಆರೋಗ್ಯಕೆ ನೆನಪಿಸಿ
ಪಯಣ ಸಾಗಬೇಕಿದೆ
ಬಂದೇ ಬರುವುದು ಸುಕಾಲ ನೆನೆದು

ಕೋವಿಡ್ ಕಲ್ಲು ಮುಳ್ಳುಗಳ ನಡುವೆಯೂ
ಬದುಕಿ ಜೀವಿಸುವ ಧೈರ್ಯ ಮೂಡಿಸಿ ಪಯಣ ಆಶಾವಾದಿಗಳಾಗಿ
ಮುಂದೆ ಸಾಗಿಸಬೇಕಿದೆ
-೦-
© Mallikarjun Bhrungimath