...

15 views

✨️ಜೀವನ✨️
ಜೀವನವೊಂದು ಮುಗಿಯದ ಕಥೆ
ಪದಗಳೇ ಸಿಗದ ಒಂದು ಕವಿತೆ
ಹಚ್ಚಬೇಕು ಇರುವ ತನಕ ಒಲವಿನ ಹಣತೆ
ಸಾಗಬೇಕು ಪ್ರತೀ ಕ್ಷಣ ಭರವಸೆಯ ಜೊತೆ

ಬಂದವರೆಷ್ಟೋ ಹೋದವರೆಷ್ಟೋ
ಜೀವನದ ಪಯಣದ ಹಾದಿಯಲಿ ಸಿಗುವರೆಷ್ಟೋ ಅಗಲುವವರೆಷ್ಟೋ
ತಿಳಿಯದ ಅರಿವಿರದ ಗೊಂದಲದಲಿ

ಹಗಲಿರುಳು ಹೋರಾಟ ಬದುಕಿಗಾಗಿ
ನಿಲ್ಲದು ಬಡಿದಾಟ ಹೊಟ್ಟೆಪಾಡಿಗಾಗಿ
ಇರುವ ತನಕ ಜೀವಿಸಿ ಬಿಡಬೇಕು ಅನುಕ್ಷಣ
ಯಾರಿಹರೋ ಇಲ್ಲವೋ ಮರಣದ ಆ ಕ್ಷಣ



© ಭಾರ್ಗವಿ ವರ್ಧನ್*(ಭಾವ)*✍🏻