...

21 views

ಮುಂಜಾವಿನ ಮಬ್ಬು....
ಮುಸುಕಿದೀ
ಮಬ್ಬಿನಲಿ
ತರಗುಟ್ಟುವ ತಂಡಿಯಲಿ
ಚಿಲಿಪಿಲಿಗುಟ್ಟುತ್ತಾ
ಹಾರಾಡುತಿಹ
ಹಕ್ಕಿಗಳ ಹಿಂಡು
ಚಿಗುರಲೆಯ ಮಡಿಲಲ್ಲಿ
ಜಾರುತಿಹ
ಇಬ್ಬನಿಯ ಮುತ್ತುಗಳು
ಭೂರಮೆಯ ಸ್ಪರ್ಶಿಸಲು
ಮುಗಿಲೊಳಗೆ ಮರೆಮಾಚಿದ್ದ
ಮೂಡಣದ
ಸೂರ್ಯನು
ಕಿತ್ತಳೆಯಂತೆ ಕಂಗೊಳಿಸುತ್ತಾ
ಉದಯಿಸಿಹನು
ಮನಮೋಹಿಸುವಂತೆ..
ಮುಂಜಾವಿನ
ಈ ಮಂಜಿನಲಿ ಮಿಂದೆದ್ದು
ಹಸುರಿನ ಸೀರೆಯುಟ್ಟು
ಹಕ್ಕಿಗಳ ಕಲರವಕ್ಕೆ ಇಂಬು ನೀಡಿ
ಜುಳುಜುಳು ನಾದದ ಝೇಂಕಾರದ
ಹರಿವ ಜರಿಯ ಸೊಬಗಿನೊಂದಿಗೆ
ನಾಚಿನೀರಾಗುತಿಹಳು ಪ್ರಕೃತಿ ಮಾತೆ..







© ಮಧುಶ್ರೀ S ಭಾಗವತ್