...

6 views

ತವಕ
ತವಕ
ರಚನೆ:ಭೃಂ

ಅದ್ಯಾಕೋ
ನಿನ್ನ ನಿರೀಕ್ಷೆಯಲ್ಲೇ
ಕಣ್ಣೋಟ ಬೀಜೀ ಆಗಿದೆ
ಯೋಜನೆ ಯೋಚನೆಯೂ ಇಲ್ಲ
ಮಾತು ಮಾತಲ್ಲೇ ನಿನ್ನ ಶಬ್ದಗಳು ನಗೆಕಡಲ ಸೃಷ್ಠಿಸುತ್ತಲಿವೆ ಕಿವಿಗೆ ಸಮುದ್ರಗಳ ಅಲೆಯಂತೆ
ಒಂದಿಷ್ಟೂ ಕೆಟ್ಟ ಸ್ವಾರ್ಥವಿಲ್ಲದಿದ್ದರೂ
ನಿನ್ನ ಭಾವನೆಗಳು ಯನ್ನ ಬಂದಿಸಿವೆ
ಯಾವುದೋ ದಾರಿಯಲ್ಲಿ ನೀನಿದ್ದರೂ ಅದಾವದೋ ಭ್ರಮೆಯಲ್ಲೇ ನಿನ್ನಯ ತವಕ ಯನ್ನೆದೆಯ ತಟ್ಟಿದೆ
ಹೃದಯಬಾಗಿಲು ತರೆಯಲು ಸ್ನೇಹದ key ಬಳಸಿದೆ
ಸುಳಿವೂ ನೀಡದೇ
ಒಳಹೊಕ್ಕಿದೆ
ನಾದ ಒಂದೇ ಗೆಳೆತನದ ಗಂಟೆ ಭಾರಿಸುತಿದೆ
ಕೇಳು ಬಾ ಏಳು ಬಾ ಮಲಗಿದ ಭಾವನೆಗಳಿಗೆ
ಬಡಿದೆಬ್ಬಿಸಿ ಜಾಗೃತಾವಸ್ಥೆಗೆ ಕೊಂಡೊಯ್ಯಲು
ನಿನ್ನ ನುಡಿಯಲ್ಲೇನೋ ಅದಮ್ಯವಿದೆ ಮಮಕಾರವಿದೆ
ಸಹಕಾರವಿದೆ
ನಿರೀಕ್ಷೆಯಿದೆ
ಯೋಚಿಸೊಮ್ಮೆ ಸುಮ್ಮನೆ
ವಮ್ಮನೆ ಮಾತಾಡಲು
ನಿನ್ನ ಸರೆ..
© Mallikarjun Bhrungimath