...

5 views

ಕಾವಿಯಿಲ್ಲದ ಯೋಗಿ
ಕಾವಿಯಿಲ್ಲದ ಯೋಗಿ.

ಓ..ನೇಗಿಲ ಯೋಗಿಯೇ
ಭೂತಾಯಿಯ ಹಿರಿಮಗನೆ
ಅನ್ನದಾನದ ಅರಸು ನೀನು
ಕಾವಿಯಿಲ್ಲದ ಯೋಗಿ ನೀನು

ನೇಗಿಲ ನೋಗದ ಆಧಾರವಾಗಿ
ಹಿಡಿ -ಹಿಡಿ ಮಣ್ಣ ಮುಟ್ಟಿ
ಮುಗಿದು ಬೇಡುವೆ ಧರ್ಮದ
ದೊರೆಯಾಗಿ ಪೈರು ಫಸಲಾಗಲು

ಪರಿಶುದ್ಧತ್ಮದ ಪರಂಜ್ಯೋತಿಯಾಗಿ ತನುರಿದು
ಜಗ ಬೆಳಗುವ ರವಿತೇಜನ
ವರಪುತ್ರ ನೀನು
ಬೆವರು ಬಟ್ಟಲಿನ ತೈಲ ನೀ

ಸಕಲಾತ್ಮರಗೂ ಲೇಸನ್ನು
ಬಯಸುವ ಸತ್ಯದ ಸಾಹುಕಾರ ನೀ
ಅಗಮ್ಯ ಅರಿವಿನ ಕಡಲು
ನೀಡುಗೈ ನೀಲ್ಲಿಸದ ದಾನಿ ನೀ

ನಿನ್ನoದಲೇ ಈ ಜಗದ
ಜೋಳಿಗೆಯಲ್ಲಿ ಹಿಡಿ ಅನ್ನ
ನೀನಿಲ್ಲವಾದರೆ ಜಾಲಿಯಗಿಡದ
ಜೋಳಿಗೆಯಂತೆ ಈ ಜಗದೂಡಲು...

ಕಿರೀಟ ಕಾಲಾಳುಗಳಿಲ್ಲದ
ಅನ್ನದಾನ ಪ್ರಭುವೇ
ನಿನಗಿದೋ ಕೋಟಿ ನಮನ
ನನ್ನ ಮನದ ಸಿಹಿ ಸಿಂಚನ



ಚಂದು ವಾಗೀಶ