...

4 views

ನಾಡು ಕನ್ನಡ
ನಮ್ಮ ನಾಡು ಕನ್ನಡ
ನಮ್ಮ ನುಡಿ ಕನ್ನಡ
ನಾವಿರುವ ನಾಡು
ಕಪ್ಪನೆಯ ನಾಡು

ನಮ್ಮವ್ವ ಕನ್ನಡಾಂಬೆ
ಕೈಯಾ ಮುಗಿವೇ ಭಾರತಾಂಬೆ
ದೇಶ ರಕ್ಷಣೆ ನಾಡ ರಕ್ಷಣೆ
ನನ್ನ ಪುಣ್ಯ ನನ್ನ ಹೊಣೆ

ಚಿನ್ನರ ಚೆನ್ನರು ನಾವು
ಶೂರ ಧೀರರು ನಾವು
ದೇಶಕ್ಕಾಗಿ ದುಡಿಯುವೆ
ನಾಡಿಗಾಗಿ ಮಡಿಯುವೆ

ಹೂವಿನ ಹಂದರ
ಎಳೆಯರ ಗೆಳೆಯರ
ಸಾಹಿತ್ಯ ಸಾಂಸ್ಕೃತಿಕ
ಪರಂಪರೆಯ ಪರಾಕ

ಜಾತಿ ಭೇದ ಮಾಡದೆ
ಮನಸುಗಳೆಲ್ಲ ಒಂದಾಗಿದೆ
ಬದುಕಿನ ಬೆಳಕು ಬೆಳಗುತ್ತಿವೆ
ಜೀವಗಳೆಲ್ಲ ಸಂತಸದಿ ಸಾಗುತ್ತಿವೆ

ಹಾಡಿನ ಹೃದಯದಲ್ಲಿ
ಮನಸಿನ ಭಾವದಲ್ಲಿ
ಕನ್ನಡ ನಾಡಿನೊಳಗೆ
ನಾಡಿನ ಗೂಡಿನೊಳಗೆ
ಕನ್ನಡಮ್ಮನ ಮಡಿಲೊಳಗೆ

ನಾಗರಾಜ್ ಬಾ ಹೊನ್ನುಟಗಿ
ಬಾಗಲಕೋಟ
© All Rights Reserved