...

20 views

ಸಂಕಲ್ಪ - 1
ಒಂದು ನುಡಿಯ ಕೇಳು ನೀನು
ಮರೆಯಬೇಡ ಎಂದೂ ಇದನು;
ಬದುಕಿನ ವಿಧಿಯ ಆಟ
ನಾಳೆಯ ಜೀವನ ಪಾಠ........................................

ಕಲಿಸುವ ವಿಧಿಯ ಮುಂದೆ
ಎಲ್ಲರೂ ವಿದ್ಯಾರ್ಥಿಯು;
ನೆನೆದು ಪ್ರತಿದಿನವೂ
ನಡೆಯೋ ಪ್ರತಿಕ್ಷಣವೂ
ಅರಿತು ಅದರಂತೆ.................................................

ತೋರದೆ ತಾರತಮ್ಯ
ಸಾರು ನೀ ಸಾಮರಸ್ಯ;
ಯಾರನೂ ದ್ವೇಷಿಸಬೇಡ
ಯಾರನೂ ದೂಷಿಸಬೇಡ.....................................

ತೊಂದರೆ ನಿನಗೆ ಬಂದರೆ
ಗುರಿಯ ತೊರೆಯಬೇಡ
ಎಂದಿಗೂ ಗುರುವ ಮರೆಯಬೇಡ;
ನಿನ್ನ ಗುರಿಯು ಮುಂದೆ ಇರಲಿ
ಕಾಯೋ ಗುರುವು ಹಿಂದೆ ಇರಲು..........................

ಶಕ್ತಿಗಿಂತ ಯುಕ್ತಿ ಮೇಲು
ಶ್ರಮದ ಮುಂದೆ ಸೋಲೇ ಇಲ್ಲ;
ಕಠಿಣ ಕಾರ್ಯದೆ ಇರಲಿ ಧೈರ್ಯವು
ಇಂದಿನ ಸೋಲು ನಾಳೆಯ ಸವಾಲು.....................
_______________________________________

ಒಂದು ನುಡಿಯ ಕೇಳು ನೀನು
ಮರೆಯಬೇಡ ಎಂದೂ ಅದನು;
ಅನುಮಾನ ಅವಮಾನ
ಜಯಿಸಿದರೆ ಸನ್ಮಾನ............................................

ರೋಷವ ಬದಿಗಿಟ್ಟು
ಮೊದಲು ನೀ ನಿನ್ನ ಗೆಲ್ಲು;
ಎಲ್ಲರೊಳಗೊಂದಾಗಿ
ಎಲ್ಲವ ಎದುರಿಸಿ ನಿಲ್ಲು.........................................

ಆಸೆಯ ಬಿಡು ನೀನು
ಯಾವುದೂ ಶಾಶ್ವತವಲ್ಲ;
ನೆನ್ನೆ ಯಾರದೋ ನಾಳೆ ಯಾರಿಗೋ
ಇಂದು ಊಹಿಸಿ ಹೇಳಲಾಗದು.............................

ಯಾರೇನೇ ಅನಲಿ
ಆಲೋಚಿಸಿ ಅವಲೋಕಿಸು;
ಸತ್ಯವು ಅದು ನಿತ್ಯವು
ಸುಳ್ಳೇ ನಾಳೆಯ ಚುಚ್ಚುವ ಮುಳ್ಳು.......................

ಬೆಳಗಲು ನಿನ್ನೀ ಬಾಳು
ಸೇರಲು ಹೊಸ ಮೈಲಿಗಲ್ಲು;
ಬಿಡದಿರು ದೃಢ-ಸಂಕಲ್ಪ
ಇದೇ ಜೀವನ-ಯಾನ ಜೀವಮಾನ.......................

© chethan_kumar