...

9 views

ಕನಸಿನ ಅರಮನೆ.....
ಕಟ್ಟಿರುವನು ನನ್ನ ನಲ್ಲಾ
ನನಗಾಗಿ ಅರಮನೆಯೊಂದ
ಅವನ ಹೃದಯದಲಿ...❤️

ಸಿಂಗರಿಸಿಹನು ಪ್ರೀತಿಯ
ಪದಗಳಲಿ ಬಂಗಾರದ
ತಳಿರು ತೋರಣವ ...

ಹಾಸಿಹನು ನಾ ಬರುವ ದಾರಿಗೆ
ಘಮಿಸುವ ಹೂವಿನ ಹೆಜ್ಜೆ🌺

ನಾ ಬರುವಾಗ ಹೆಜ್ಜೆ ಹೆಜ್ಜೆಗೂ.
ಗೆಜ್ಜೆಯ ಸದ್ದು ಪ್ರತಿದ್ವನಿಸಲು
ಇಟ್ಟಿರುವನು ಅಲ್ಲಲ್ಲಿ
ಧ್ವನಿವರ್ಧಕವ...(.ಸೌಂಡ್ ಸಿಸ್ಟಮ್)

ಅವನ ಹೃದಯಕೆ
ಒಲವಿನ ಮೆಟ್ಟಿಲುಗಳ ಮಾಡಿ
ಇಟ್ಟಿರುವ ನಾ ಏರಲು ಸಿಂಹಾಸನವ
ಜಗಮಗಿಸುವ ದೀಪಗಳ
ಅಲಂಕಾರದಿ...

ನಾ ಊಹಿಸಿರಲಿಲ್ಲ ಕನಸಲ್ಲೂ
ನನಗಾಗಿ ಇಂತಹ ಅರಮನೆ
ಕಟ್ಟಿರುವನೆಂದು..
ನಾ ಕಂಡು......ಅದನ್ನು ಸೋತು ಶರಣಾದೆ
ಇಂದೇ........


ದೇವಿ ✍️