...

3 views

"ಕೂಗಿದರು ಕೇಳದೇ.....
"ಆಸೆಯ ಹೊತ್ತು
ಭೂಮಿಗೆ ಬಂದೆ

ಕನಸ ಹೊತ್ತು ಸಂಸಾರ
ನೌಕೆಯಲಿ ನಿಂದೆ

ಮಮತೆಯ ಮಡಿಲಿಗೆ
ತಾಯ್ತನವ ಕಂಡೆ

ಗಂಡನ ಜೊತೆಯಲಿ
ನೋವಲ್ಲೇ ಬೆಂದೆ

ಮಗನ ನಗುವಲಿ
ಸಂತಸದಿ ನಲಿದೆ

ಕೊನೆಗೆ ಹೀಗೇತಕೋ
ಕರುಳ ಬೇಗೆ ತಾಳದೆ

ಮಗನ ಪ್ರೀತಿಯು
ಹಣದಲಿ ಕಣ್ಮುಚ್ಚಿದೆ

ಹಣದ ಮುಂದೆ
ತಾಯಿ ಪ್ರೀತಿಯು ಕುರುಡಾಗಿದೆ

ಹೆಣ್ಮಿನ ಆಸೆ ಕನಸಿಗೆ
ಭೆಲೆ ಎಲ್ಲಿದೆ

ಕೊರಗುತ ನೋವಲಿ
ಮಣ್ಣಲಿ ಮಣ್ಣಾದೆ

ಆಸೆಯು ತೀರದೇಕೆ
ಆರ್ಥನಾದ ಕೇಳದೇಕೆ

ಬವಣೆಯಲಿ ಸ್ವರ್ಗವು
ಎನಗೆಲ್ಲಿದೆ

ಜೀವವು ಬದುಕ
ನುಂಗಿದೆ

ಬಾಳೇ ಮುಗಿದು
ಕದವು ಮುಚ್ಚಿದೆ

ಸಾವಲು ನೆಮ್ಮದಿಯ
ಕಾಣದಾದೆ..,✍
😔shobha🤷‍♀️