...

5 views

ನಿಮ್ಮ ಹೆಜ್ಜೆ ನಮ್ಮೊಂದಿಗೆ...
ಹೇ.. ಹರನೆ
ಭವ ಹರನೇ ಭವಾನಿ ಶಂಕರನೆ
ನನ್ನ ಹೃದಯದ ಭವ್ಯ ಮಂದಿರದಿ
ನೆಲೆಸಿರುವೆ ನೀ.

ನನ್ನ ಬದುಕಿನ ಭಾಗವು ನೀನು
ಭವ ಬಂಧನವ ಬಿಡಿಸಿ ಭಾವೈಕ್ಯತೆಯಲಿ
ಬದುಕನು ಕಲಿಸಿದವ ನೀ.

ಬೇಡನೊಬ್ಬನ ಪೂಜೆಗೆ ಒಲಿದವ ನೀ
ಸಮಾಜ ಹೆಣ್ಣೆಂದು ಜರಿದ ಅಕ್ಕಳನ್ನು
ಹೆಜ್ಜೆ ಹೆಜ್ಜೆಗೂ ಪೋಷಿಸಿದ ಪರಮಾತ್ಮ ನೀ

ಊರ ತೋಟಿಯ ಜತೆ ನಿಂತು
ಜಗದ ತೋಟಿ ನಾನು ಎಂದ
ಜಗದ ಜಾಲಗಾರ ನೀ..

ಈ ದೇಹದ ಅಂತ್ಯದ ವರೆಗೂ ಅನಂತವಾಗಿ
ನೆಲೆಸಿ ನಿಮ್ಮ ಹೆಜ್ಜೆಯನು ನನ್ನೊಂದಿಗೆ ಇಡುತ
ಕರೆದೋಯ್ಯೋ...ಹರೇನೇ.🙏

@ದೇವಿ..✍️