...

14 views

ಅಶ್ವಮೇಧ
ಅಗೋ ಬಂದಿತು ಅಗಸ್ತ್ಯರ ಸಲಹೆ
ಅಯೋಧ್ಯೆಯ ಅಧಿಪತಿ 
ಶ್ರೀ ರಾಮನ ಬಳಿಗೆ.......
ಚಕ್ರವರ್ತಿಯ ಚಕ್ರವ್ಯೂಹಕೆ
ಆಚರಿಸಲು ಮಹಾಯಾಗವು
ಅರಸಿ ಬರುವುದು ಮಹಾಯೋಗವು.......

ಆರಂಭವು ಸಕಲ ಸಿದ್ಧತೆ
ವಿಜೃಂಭಿಸಿತು ರಾಜ ವೈಭವ 
ಶ್ರೀ ರಾಮ ಸಹಿತ......
ಸ್ವರ್ಣ ಸೀತೆಯ ಪ್ರತಿಮೆಯ ಮಾಡಿ
ಅಗೋ ಯಜ್ಞಕೆ ಅಗ್ನಿ ಸ್ಪರ್ಶವು
ನಿರತ ಸಾಗಿತು ಪುಷ್ಪಾರ್ಚನೆ
ವೇದ ಘೋಷಗಳ ನಾದಾರ್ಚನೆ..

ನಿಯಮಾನುಸಾರ ಮುನಿಗಣಂಗಳು
ವೈಶಾಖ ಪೌರ್ಣಿಮೆಯ ದಿನದಿ 
ಸರಯೂ ನದಿಯ ದಡದೆ 
ಶತ್ರುಘ್ನನ ಆಜ್ಞೆಯಡಿ ಸೇನಾಧಿಪತ್ಯವು, ಸೇನೆಯೊಡನೆ
ಶೃಂಗಾರಗೊಂಡ ಶ್ವೇತಾಶ್ವವ
ಗಂಭೀರ ನಡಿಗೆಯಲಿ ಬೀಳ್ಕೊಟ್ಟರು.......

ರಾಜ್ಯ ರಾಜ್ಯವೂ ರಾಮರಾಜ್ಯವು
ರಾಜರಾಜರ ಮಹಾರಾಜರ
ಶರಣಾಗತಿಯಲಿ ಸೋಲನರಿಯದೆ
ವಿಜಯ ಯಾತ್ರೆಯು ಸಾಗಿತು ನಿರತ.......

ಅಶ್ವಮೇಧದ ಕುದುರೆ ಬಂತು
ಎಲ್ಲರ ಮನವನು ಸೆಳೆಯುತಲಿತ್ತು
ಅದರ ಹಣೆಯಲಿ ಇತ್ತೊಂದು ಪತ್ರ
ಅದನು ಓದಲು ಹೋದರು ಲವಃಕುಶ.......

ಶ್ರೀ ರಾಮ ಚಂದ್ರ ಅವರ ತಂದೆ
ಎಂದು ಅರಿಯದೆ 
ಕುದುರೆಯ ಕಟ್ಟಿ ಯುದ್ಧ ಸಾರಿದರು
ಶಸ್ತ್ರಾಸ್ತ್ರ ಶಾಸ್ತ್ರವ ಅರಿತ ಕುವರರು
ವೀರ ಕ್ಷತ್ರಿಯರಂತೆ ನಿಂತರು.......

ಎದುರು ನಿಂತ ಸೇನೆಯೋಡನೆ
ಮಿಂಚಿನಂತೆ ಸೆಣಸಾಡಲು 
ಪೌರುಷವ ತೋರಲು
ಶತ್ರುಘ್ನ ಸೇನೆಯು ವಿಫಲವಾಯಿತು.......

ಲವಃಕುಶರ ಕುಶಲ ಯುದ್ಧಕೆ
ಪ್ರತ್ಯುತ್ತರ ಕೊಡಲು
ಸುಗ್ರೀವ ಹನುಮರ 
ಪರಾಕ್ರಮ ಸಾಲದಾಯಿತು.......

ಅಗೋ ಬಂದನು ರಾಮ ಚಂದ್ರನು 
ರಣರಂಗ ನೋಡುತ ತಟಸ್ಥನಾಗುತ 
ಮನವೋಲೈಸುವ ಸತತ ಯತ್ನಕ್ಕೆ
ಕುವರರ ಮನವು ಸೋಲದಾಯಿತು.......

ಮನವೊಪ್ಪದ ಯುದ್ದ 
ಮಾಡಲು ರಾಮ
ಆಕ್ರೋಶದ ಯುದ್ಧ 
ಮಾಡಲು ಲವಃಕುಶ
ಪ್ರತೀ ದಾಳಿಗೆ ಪ್ರತಿದಾಳಿಯಾಗಲು
ನಿರತ ಯುದ್ಧವು ಮುಗಿಯದಾಯಿತು.......

ಯುದ್ಧ ಭೀಕರತೆ ಮುಗಿಲು ಮುಟ್ಟಲು
ಋಷಿ ವಾಲ್ಮೀಕಿಯು ಧಾವಿಸೆ ಬೇಗ
ತಂದೆ ಮಕ್ಕಳ ಯುದ್ಧವ ಕಂಡು
ತಂದರು ಸಮರದೇ ಸಾಮರಸ್ಯವು
ಸಮರಾರುಂಟು ಇಬ್ಬರ ನಡುವೆ
ಅಂತ್ಯವಾಯಿತು ಮಹಾಯುದ್ಧವು
ಚಿರವಾಗಿ ಉಳಿಯಿತು 
ಬಾಲವೀರರ ಬಲಾಬಲಗಳು 
ಶ್ರೇಷ್ಠ ಶಿಷ್ಯರ ವೀರಗಾಥೆಯು......

© chethan_kumar