...

7 views

ಪರಮ ಪದ
ಪರಮ ಪದದ ಪಠ್ಯ ಪುಸ್ತಕ,
ಪರಮ ಪುರುಷನ ಪಾರಿತೋಷಕ!

ಪಾಪ ಪರಿಹರಿಸೊ ಪದಗಳುಂಟು,
ಪುಣ್ಯವೀವ ಪದ್ಯಗಳುಂಟು.
ಪದ ಪದಗಳಲಿ ಪರಿಹಾರವುಂಟು,
ಪಾಪಿ ಪ್ರಶ್ನೆಗಳ ಪೀಡೆಗೆ.

ಪಾರ್ಥನಿಗೆ ಪರಂಧಾಮನ ಪಾಠ,
ಪ್ರತಿದಿನದ ಪರೀಕ್ಷೆಗೆ ಪಟಕ ಪಠ್ಯ,
ಪಠಿಸಿ ಪಟುಗಳಾಗಿ ಪರೀಕ್ಷೆಯಲಿ,
ಪಡೆಯೋಣ ಪ್ರತಿಫಲದ ಪದವಿಯ.

ಪಂಚಭಕ್ಷ್ಯ, ಪರಮಾನ್ನ, ಪಪ್ಪಳ,
ಪಚಡಿ, ಪಂಚಾಮೃತದ ಪಂಟಿ,
ಪಾಕಶಾಸ್ತ್ರದ ಪಂಡಿತನ ಪಾಕ,
ಪಾರಿಸದಿದ್ದವ ಪಾಪ ಪ್ರಾಣಿ!

ಪರಮ - ಶ್ರೇಷ್ಠವಾದ
ಪಟಕ - ಸ್ಫಟಿಕ
ಪಟು - ಸಮರ್ಥನಾದವನು
ಪಪ್ಪಳ - ಹಪ್ಪಳ
ಪಂಟಿ - ಭೋಜನ
ಪಾರಿಸು - ಪಾರಣೆ ಮಾಡು
© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಭಗವದ್ಗೀತೆ