...

6 views

ಚಪಲ ಚಿತ್ತ
ಚಪಲ ಚಂಚಲ ಚಿತ್ತವೆ,
ಚಣಕು ಚಣಕೂ ಚೆಲ್ಲಾಟವೇ?

ಚಿಣ್ಣನಾಗಿರೆ ಚಣ್ಣ, ಚಕ್ಕುಲಿ,
ಚಿರೋಟಿ, ಚೇಪೆ, ಚೆಂಡು, ಚೋದ್ಯವು.
ಚಿಗುರುಮೀಸೆಯವ ಚಂಚರೀಕ,
ಚುಂಬಕ ಚೆಲ್ವೆಯ ಚಂಪೆ, ಚೆಂದುಟಿ.

ಚಾಳೀಸಕೆ ಚಪ್ಪಳದ ಚಪಲ,
ಚಯನ ಚರ್ಚೆಯೆ ಚರಿತಾರ್ಥವು.
ಚೌಷಷ್ಟಿಗಾಸೆ ಛತ್ರ, ಚಾಮರ,
ಚೆಂಗು ಚಿತ್ತದ ಚೂಚಾಟವು.

ಚಿತ್ತದಲಿ ಚಿತ್ರಗುಪ್ತ ಚಲಿಸಲು,
ಚಪಲ ಚಿತ್ತಕೆ ಚಾಟಿ ಚುರುಕು!
ಚಡಪಡಿಸುತಿರಲು ಚೊಂಚು ಛಿದ್ರಕೆ,
ಚಿತೆ, ಚೈತಾಗ್ನಿ, ಚೈತ್ಯ!

ಚಂಚರೀಕ - ದುಂಬಿ
ಚಯನ - ಕೂಡಿಹಾಕುವಿಕೆ
ಚೌಷಷ್ಟಿ - ಅರವತ್ನಾಲ್ಕು
ಚೆಂಗು - ಹಾರು, ಜಿಗಿ
ಚೂಚಾಟ - ಜೂಟಾಟ
ಚೊಂಚು - ವಕ್ರತೆ
ಚೈತಾಗ್ನಿ - ಚಿತೆಯ ಬೆಂಕಿ
ಚೈತ್ಯ - ಚಿತೆಯ ಸ್ಮಾರಕ
© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಚಪಲ_ಚಿತ್ತ

Related Stories