...

15 views

ಭೇದವೇಕೆ? ಮನವೆ
💐ಭೇದವೇಕೆ💐

ಇವರದ್ದು ದುರ್ಗಾ
ಅವರದ್ದು ದರ್ಗಾ
ಎರಡು ಕೂಡಿದರೆ ಸ್ವರ್ಗ

ಇವರದ್ದು ಬೈಬಲ್
ಅವರದ್ದು ಗ್ರಂಥಸಾಹಿಬ್
ಇಲ್ಲ ಇದಕ್ಕೇನು ಇಕ್ವಲ್

ಇವರದ್ದು ಬೋಧಿಸತ್ವ
ಅವರದ್ದು ಜೈನತತ್ವ
ಇವುಗಳಲ್ಲಡಗಿದೆ ಜೀವನಸತ್ವ

ಗೀತಾ ಕುರಾನ್
ಹೇಳಿದ್ದಾದರೇನು?
ಸತ್ಯ ಶಾಂತಿ ಪ್ರೇಮತಾನೆ

ಭೀಮ ಬಸವ ಏಸು
ಸಹಿಸಿದರದೆಷ್ಟು ನೋವ
ಮೂಡಿಸಿದರೆಲ್ಲರಲಿ ತ್ಯಾಗ ಪ್ರೇಮದ ಭಾವ

ವಚನ ಕೀರ್ತನೆ
ದೇವನಲ್ಲಿ ನೀವೆದನೆ
ಮತ್ತೇಕೆ ಭೇದ ಮನವೇ

✍️ ಶ್ರೀಮತಿ ಮಾಧುರಿ ಎಸ್ ಕೆ