...

10 views

ಸಂಬಂಧ....
ಮೊದಮೊದಲು ಎಲ್ಲಾ ಚೆನ್ನವೇ..
ಬರುಬರುತ್ತಾ ಸಲುಗೆಯೊಳಂತರ
ಕಡಿಮೆ ಆಗುತ್ತಾ ಬಂದ ಹಾಗೇ
ಹಳಸುವುದು ಬಂಧ ತಂಗಳಾಗಿ..‌
ಬೆಸೆದ ಆಪ್ತ ಬಂಧಗಳಿಗೇನೇ ಅಡೆತಡೆ
ಎದುರಾದರೂ ಸರಿದೂಗಿಸಿ ಆಪ್ತವಾಗೇ ಇರಿಸಿಕೊಳ್ಳುವಲ್ಲಿ ಪ್ರಯತ್ನಿಸಿ
ನಡೆವುದು ಕರ್ತವ್ಯ ನಿರತ ಧರ್ಮ ...
ಹಳಸದೇ ಇರಿಸಿಕೊಳ್ಳಬೇಕು
ಬೆಳದಿಂಗಳ ಹೊನಲಿನ ಹಾಲ್ಬಿಳುಪಾಗಿ...
ಬಂಧದ ಸುಮಧುರತೆಯುಳಿಸಿ
ನಡೆವುದು ಸುಲಭದ ಮಾತಲ್ಲ..
ತುಸು ಕಷ್ಟದಾಯಕವೇ ...
ಆಗಾಗ ಬೀಳುವ ಕಾಡ್ಗಿಚ್ಚಿನಂತ
ಹೊಟ್ಟೆ ಕಿಚ್ಚಿನ ಉರಿಯ
ನಂದಿಸುತ್ತಾ,ತಂಪಾಗಿ,ಸೊಂಪಾಗಿ
ಬಂಧ ಬೆಳೆಸಿ ಉಳಿಸಿ ಬಾಳಬೇಕೆಂದರೆ
ಗಟ್ಟಿಯಾದ ನಂಬಿಕೆಯ ತಳಹದಿಯ
ಬಧ್ರತೆಯಿರಬೇಕು.‌‌..ಹಿತ್ತಾಳೆ ಕಿವಿಯಾಗದೆಯೇ
ಒಳಿತು ಕೆಡಕುಗಳ ಪರಮಾವರ್ಶಿಸುತ
ಯಾವುದು ಸತ್ಯ, ಮಿಥ್ಯ ಎನುವದ
ಪರಾಂಬರಿಸಿ ನೋಡಿ ಮುನ್ನಡೆದರೆ
ಸಂಬಂಧ ನ್ಯಾಯದ ತಕ್ಕಡಿಯೊಳಗೆ ಸಮತೂಕದಿಂದ ಅಳೆದು ತೂಗುವ
ಸೂಕ್ಷ್ಮ ಮತಿಯೊಳಗಿನ ಅರಿವಾಗಿರಬೇಕು..
✍️ಶೋಭಾ ನಾರಾಯಣ...