...

0 views

ಕನ್ನಡಿಯ ಬಿಂಬ ಭಾಗ2
#दर्पणप्रतिबिंब #MirrorReflections

ನೈಲ್ ನೀಡಿದ ನಂಬರ್ ನ ಸೇವ್ ಮಾಡಿಕೊಂಡಳು. ಮೆಸೇಜ್ ಮಾಡುವುದಾ ಬೇಡವಾ ಎಂದು ಯೋಚಿಸುತ್ತಾ ಕುಳಿತಳು. ರಾತ್ರಿ ಊಟ ಮುಗಿಸಿ ಮಲಗಲು ಹೋದವಳಿಗೆ ನಿದ್ದೆಯೇ ಬರಲಿಲ್ಲ. ಏನಾದರೂ ಆಗಲಿ ಎಂದು ಮೆಸೇಜ್ ಮಾಡಿಯೇ ಬಿಟ್ಟಳು.
ಆಗ ರಾತ್ರಿ ಹನ್ನೊಂದುವರೆ. ಗಾಢ ಕತ್ತಲೆ. ಸುತ್ತಲೂ ನಿಶ್ಯಬ್ದ. ರೇಣುವಿನ ಹೃದಯ ಹೊಡೆದುಕೊಳ್ಳುತ್ತಿತ್ತು. ಈ ಮೊದಲು ಈ ತರಹ ಯಾರ ಜೊತೆಗೂ ಮಾತನಾಡಿದವಳೇ ಅಲ್ಲ. ಆ ತುಂಟತನ, ನಗು , ಸಲಿಗೆಯನ್ನು ಅವಳು ಯಾರೊಂದಿಗೂ ಬೆಳೆಸಿಕೊಂಡವಳಲ್ಲ...

ನೈಲ್ ಮೊಬೈಲ್ ನಲ್ಲಿ ಸದ್ದಾಯಿತು. ಹಾಗೆ ನಿದ್ದೆಗೆ ಜಾರಿದವನು. ಕಣ್ಣುಜ್ಜಿ ನೋಡಿದ. ಹೊಸ ನಂಬರ್ ನಿಂದ ಸಂದೇಶ ಬಂದಿತ್ತು. ಇದು ಅವಳದೆ ಎಂದು ತಿಳಿದುಹೋಯಿತು.
ಹಲೋ..
ಹೇಳಿ.. ಹೇಗಿದ್ದೀರಿ? ನಿದ್ದೆ ಬರಲಿಲ್ಲವೇ?

ಇಲ್ಲ.
ಏಕೆ?!
ನೀವು ಹೇಳಿದ ಬಗ್ಗೆ ಯೋಚಿಸುತ್ತಾ ಕುಳಿತಿದ್ದೆ.

ಏನು? ನಾನೇನು‌ ಹೇಳಿದೆ. ಅದೇ I wanna share something. ಎಂದರಲ್ಲಾ.. ಏನದು.?!

ಹೋ.. ಅದಾ.. ನೀವು ಒಪ್ಪಿದರೆ ಪುನಃ ಇನ್ನೊಮ್ಮೆ ಮಾತನಾಡಲು ಭೇಟಿಯಾಗುವ ಎಂದು ಕೇಳಿದೆ.

ರೇಣು : ಹ್ಮ. ಮತ್ತೆ ಹೇಳಿ? ನೀವು ಎಲ್ಲಿಯವರ? ಏನು ಮಾಡಿಕೊಂಡಿರುವುದು.

ನೈಲ್ : ನಾನು ಕಂಪೆನಿಲಿ ಕೆಲಸ. ಹೈದರಾಬಾದ್ ನಮ್ಮ ನೇಟಿವ್. ಜಾಬ್ ಗೋಸ್ಕರ ಬೆಂಗಳೂರಿಗೆ ಬಂದೆ.

ಓಕೆ.

ಅದೆಲ್ಲ ಏಕೆ? ಮಾತನಾಡಲು..

ಹಾಗಲ್ಲ. Basic information ಆದರೂ ಬೇಕಲ್ಲವೇ?!
ನೀವು ಯಾರೋ ಏನೋ ಅಪರಿಚಿತನ ಜೊತೆ ಹೇಗೆ ಮಾತು ಮುಂದುವರಿಸುವುದು.

ನೈಲ್ : ಇಲ್ಲಿ ಎಲ್ಲ ಪರಿಚಿತರ ನಡುವೆಯೇ ನಡೆಯುತ್ತಿದೆಯೇ?

ರೇಣು : ಹಾಗಲ್ಲ.

ನೈಲ್ : ಓಕೆ. ಚಿಂತೆ ಬಿಡಿ. ಅಪರಿಚಿತರಾದರೇ ಒಳ್ಳೆಯದು. ಇಂತಿ ನಿನ್ನ ಪ್ರೀತಿಯ ನಾನ್ಯಾರೋ?
ಟ್ಯಾಗ್ ಲೈನ್ ನೋಡಲಿಲ್ಲವೇ?

ರೇಣು : 😊
ರೇಣು ಮನಸ್ಸಿನಲ್ಲಿ ನಿರಾಳ ಭಾವ. ನಿಜಕ್ಕೂ ಕೌತುಕ. ಅವನ್ಯಾರು ಅಪರಿಚಿತ ಬರುವ. ಆಪ್ತನಂತೆ ಮಾತನಾಡುವ. ಅಂದ‌ಚಂದವ ಹೊಗಳುವ. ತೊಂದರೆ ಕೊಡುವ ಯಾವ ಕೆಟ್ಟ ಆಲೋಚನೆಯೂ ಇಲ್ಲ. ನಾಳೆ‌ ಇವನಿಂದ ಯಾವ ಸಮಸ್ಯೆ ಕೂಡ ಆಗಲಾರದು, ಎಂಬುದು ಸ್ಪಷ್ಟವಾಗಿ ತಿಳಿದುಬಂತು.

ನೈಲ್ : where are you going?
are you busy. ನಿದ್ದೆ ಬರುತ್ತಿದೆಯಾ?

ರೇಣು : ಇಲ್ಲ ಇಲ್ಲ.

ಹ್ಹ ಹ್ಹ 😅😅😅 ಮತ್ತೆ ಏನು ಯೋಚಿಸುತ್ತಿದ್ದೀರಿ?

ಹೇಳಿ ಇನ್ನೇನು ಸಮಾಚಾರ.?

ನೈಲ್ : ನನಗ್ಯಾಕೋ ನಿಮ್ಮನ್ನು ನೋಡಿದ ಕೂಡಲೇ ನಿಮ್ಮ ಮೇಲೆ attract ಆಗಿಬಿಟ್ಟೆ. ನಿಮಗ್ಯಾರಾದರೂ boy friend ಇದ್ದಾರಾ?

ರೇಣು: ಇಲ್ಲ. ನಾನು ಒಂಟಿ. office ಮನೆ - ಮನೆ office ಇಷ್ಟೇ ಬದುಕು.

ಏಕೆ? ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ?

what? ನಾನೇನು ಹಾಳು ಮಾಡಿಕೊಂಡೆ.

ಈ ಜೀವನದಲ್ಲಿ ದುಡಿಯುವುದು, savings , achievements ಎಲ್ಲಾ ಇದ್ದದ್ದೆ. ಆದರೆ ನಿಮ್ಮ s*x life ಕತೆ ಏನು?

ಅದೇಕೆ ಬೇಕು? ಮದುವೆಯಾಗಲು ಯಾರು ಇಷ್ಟ ಆಗಲಿಲ್ಲ.

ಮದುವೆಯಾಕೆ ಬೇಕು?

what? ಈ ತರಹ ಯಾರು ಬದುಕುತ್ತಾರೆ?

s*x ಮಾಡಲು ಮದುವೆ ಯಾಕೆ ಬೇಕು ಕೇಳಿದೆ?

ರೇಣುವಿಗೆ ಏನನಿಸಿತೋ ಏನೋ?!
Bye. ಎಂದಳು.

ನೈಲ್ : ನಾನೇನಾದರು ತಪ್ಪು ಮಾತನಾಡಿದೆನಾ?
sorry. if i am not wrong. ಕೆಟ್ಟ intention ಏನೂ ಇಲ್ಲ.
ರೇಣುವಿಗೆ ಇದರ ಬಗ್ಗೆ ಒಮ್ಮೆ ಕೂಡ ಯೋಚಿಸಿದವಳೇ ಅಲ್ಲಾ... ಅವಳು ಹೆಣ್ಣು ಎಂಬುದೇ ಮರೆತಂತೆ ಬದುಕುತ್ತಿದ್ದಳು‌ ಅವಳದೇ ಸೌಂದರ್ಯವನ್ನು ದೇಹದ ಅಂದವನ್ನು ಅವಳು ಒಮ್ಮೆಯೂ ಕನ್ನಡಿಯಲ್ಲಿ ಕಂಡುಕೊಂಡವಳಲ್ಲ..

ಏಕೆ ಹೀಗೆ? ಹೆಣ್ಮಕ್ಕಳು ತಮ್ಮ ಅಂಗಾಂಗಗಳ‌ ಮೇಲೆ ನಿಸ್ಸಾರ ತೋರಿಸುವುದು? ಗಂಡಿಗೆ ಕಾಣುವ ಸೌಂದರ್ಯ, ಹೆಣ್ಣಿನ ಮೇಲಾಗುವ ಪ್ರೀತಿ ಮೋಹ, ಅವಳಿಗೆ ಅವಳ‌ ಮೇಲೆ ಏಕಿಲ್ಲ.?!

ರೇಣು ಯೋಚಿಸುತ್ತಾ ಕಣ್ಣು ಮುಚ್ಚಿದಳು. ನಿದಿರೆಗೆ ಜಾರಿದ್ದು ತಿಳಿಯಲೇ ‌ಇಲ್ಲ.

ನೈಲ್ : ಹಲೋ ಹಲೋ.. Are you there?

ಅತ್ತಲಿಂದ ಮೆಸೇಜ್ ಬರಲಿಲ್ಲ.
ಮಲಗಿದಳೆಂದು ಸುಮ್ಮನಾದ.

ನೈಲ್ ಇನ್ನು 28 ವಯಸ್ಸಿನ ತರುಣ. ಅವನು ಹೆಣ್ಣಿನ ಸೌಂದರ್ಯದ ಆರಾಧಕ. ಆದರೆ ಒಮ್ಮೆ ಆಕರ್ಷಿತನಾದರೆ ಪಡೆಯದೇ ಬಿಡದವನು. ಹಾಗೆಂದು ನಂತರ ಮತ್ತೆ ಬೇಕೆಂದು ಪೀಡಿಸದವನು. ಅವನದೆ ಒಂದಷ್ಟು ನಿಯಮಗಳನ್ನು ಹಾಕಿಕೊಂಡು ಅದೆಷ್ಟು ಹೆಣ್ಮಕ್ಕಳ ಜೊತೆಗೆ flirt ಮಾಡಿದ್ದಾನೋ ತಿಳಿಯದು. He is a friendly But Harmless Boy.
ನಾಳೆ ಅವಳಾಗಿಯೇ ಮೆಸೇಜ್ ಮಾಡುವಳು ಎಂಬ ಭರವಸೆ ಅವನಿಗಿತ್ತು.


© Writer Sindhu Bhargava