...

6 views

ಗಝಲ್
ಹಗಲಿರುಳು ಎನ್ನದೆ ಹೊಳೆಯುವ ನಕ್ಷತ್ರ ನೀನು
ಮುಗಿಲಿನ ಮರೆಯಲಿ ನಲಿಯುವ ನಕ್ಷತ್ರ ನೀನು

ಸೆಳೆದು ಕಣ್ಣಲಿ ಸೆರೆಯಾಗಿಸೆ ಒಳಗೊಳಗೆ ಪುಳಕ
ಮುದ್ದು ಮನದೊಡತಿ ಪುಟಿಯುವ ನಕ್ಷತ್ರ ನೀನು

ಮುದುಡಿದ ಬದುಕಿಗೆ ಬಂದೆ ಕನಸುಗಳ ಬಿತ್ತುತಲಿ
ಗುಳಿ ಕೆನ್ನೆಯ ಸುಳಿಯಲಿ ಸೆಳೆಯುವ ನಕ್ಷತ್ರ ನೀನು

ನೀನಾಗಿಹೆ ಮೃದು ಮಧುರ ಮಾತಿನ ರಾಯಭಾರಿ
ಅನುನಿತ್ಯ ಒಲವಿನ ಮಳೆಗರೆಯುವ ನಕ್ಷತ್ರ ನೀನು

ಅರಿತೆನು ಸತತ ಪ್ರಯತ್ನವಿರೆ ವಿಜಯವು ನಿಶ್ಟಿತ
ಅನುರಾಗದ ಮಿಡಿತಕೆ ಒಲಿಯುವ ನಕ್ಷತ್ರ ನೀನು

© ವಿಜಯ್ 💫