...

2 views

ಶಿಶುಗೀತೆ : ಇರುವೆಗಳು
ಶಿಶುಗೀತೆ : ಇರುವೆಗಳು

ಇರುವೆಗಳೇ ಇರುವೆಗಳೇ
ಎತ್ತ ಕಡೆಗೆ ಸಾಗುವಿರಿ
ನಿಮ್ಮ ಬಾಯಿಯಲ್ಲಿ
ಅಕ್ಕಿಕಾಳನ್ನು ಹೊತ್ತೊಯ್ಯುವಿರಿ

ಇರುವೆಗಳೇ ಇರುವೆಗಳೇ
ನಿಮಗೆ ದಾರಿ ತಪ್ಪದು ಹೇಗೆ?!
ಒಬ್ಬರಿಗೊಬ್ಬರು ಮಾತನಾಡಿಕೊಂಡು
ಮನೆಯ ತಲುಪುವ ಜಾಣ್ಮೆ..

ಮಳೆಗಾಲ ಚಳಿಗಾಲಕೆ
ಆಹಾರ ಬೇಡವೆ ನಿಮಗೆ
ಬೇಸಿಗೆಯ ಬಿರುಬಿಸಿಲನು
ಸಹಿಸಿಕೊಳ್ಳುವಿರಿ ಹೇಗೆ??

ಸಕ್ಕರೆ ಕಾರ್ಖಾನೆ ನಿಮ್ಮುದರದಲಿ
ಮಧುಮೇಹ ಬಾರದೇ??
ಸಿಹಿ ಎಂದರೆ ಓಡೋಡಿ ಬರುವ
ಹೇಗೆ ತಲುಪುವುದು ನಿಮಗೆ ವಾಸನೆ?!

ನಮ್ಮ ಕಣ್ಣುಗಳು ಸೂಕ್ಷ್ಮ
ವಾಸನೆ ಗೃಹಿಕೆ ಬಲು ಸುಲಭ
ಮನೆಮನೆಗೂ ತಲುಪುವ ನಮಗೆ
ವಿಳಾಸ ಕೊಡುವುದು ಬೇಡವಮ್ಮ..

© Writer Sindhu Bhargava