...

4 views

ರಾಮಧ್ಯಾನ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ

ರಾಮನ ನಾಮವೆ ತಾರಕ ಮಂತ್ರವು
ಕಾಮನೆಗಳನೇ ಸುಡುವಾ ಅನಲ |
ತಾಮಸ ಕಾಯಕೆ ಚಲಿಸುವ ಬಲವ
ನಾಮದ ಮಾತ್ರದೆ ನೀಡುವ ಸಬಲ ||

ಮರಮರ ಎನ್ನುವ ರತ್ನಾಕರನಿಗೆ
ವರಗಳ ನೀಡಿದೆ ಕಾವ್ಯವ ರಚಿಸೆ |
ಸರಯೂ ತೀರದ ಚೆಲುವಿನ ಪುತ್ತಿಗೆ
ಕರೆದರೆ ಬರುವೆಯ ಎನ್ನನು ತಣಿಸೆ ||

ಜನರನು ಕಾಡುವ ದೈತ್ಯರ ಕೊಂದವ
ಮನದಲಿ ಎನ್ನಯ ದೋಷವ ಕೊಲ್ಲು |
ಹನುಮನ ಹೃದಯದಿ ನಿಂತಿಹೆ ರಾಘವ
ಕನಿಕರ ತೋರೋ ಎದೆಯಲಿ ನಿಲ್ಲು ||

ವಂದಿಪೆ ರಾಮನೆ ನಿನ್ನಯ ಪಾದಕೆ
ಬಂದಿಹೆ ನಮಿಸುತ ಕರುಣೆಯ ಬೇಡಿ |
ಚಂದದಿ ಕರೆಯೋ ಆತ್ಮದ ಸನಿಹಕೆ
ಗಂಧದ ಹಾಗೆಯೆ ನನ್ನನು ತೀಡಿ ||

© ಕೃಷ್ಣಕವಿ

Related Stories