...

3 views

ಭಾವಗೀತೆ


ಮನಸರಳಿತು

ಚಿಗುರಿದ ಕನಸಲಿ ಅರಳಿದ ಮನಸಲಿ ತಂದಿತು ಆಸೆಯು ತುಂಬಿ ಮನದಲಿ ನಿನ್ನ ಸವಿಗಾನವ ನುಡಿಯಿತು ಒಲವಿನ ಕಡಲಲಿ ಆಲಿಸುತ ಮರೆತೋದೆ ನನ್ನೇ ಈ ಜಗದಲಿ//೧//

ಜಗದೊಳಗಿನ ಮನುಜರ ಪ್ರೀತಿಯಲಿ ಅದೊರಳಗೆ ನಿನ್ನಯ ಪ್ರೀತಿ ಹೇಗೆ ಹುಡುಕಲಿ ತಿಳಿಯದಾಯಿತೇ ಮನವೊಲಿಸುವ ರೀತಿಯಲಿ ಪ್ರೀತಿಯ ಭೀತಿ ಅತಿಯಾಗಿ ಪರಿತಪಿಸುತಲಿ//೨||

ಮರೆತೆನು ನಾ ನಿನ್ನ ಅನುರಾಗಿಯಾಗಿ ಪ್ರೀತಿಯಲಿ ಮನಸಾರೇ ಬಂದು ಸೇರೆನ್ನ ಬಾಳಿನಲಿ ಕಾಣದಾಯೀತೆಕೆ ನಿನಗೆ ನನ್ನ ಕಣ್ಣಿನಲಿ ಪ್ರೀತಿಸುವೆನೆಂದೊಮ್ಮೆ ಹೇಳು ಈ ಜನುಮದಲಿ//೩//

ರಾಧಿಕಾ ಗಿರೀಶ್ ಮಯ್ಯ ಬಿ.ಸಿ.ರೋಡ್.