...

9 views

ತಾರಾ ಸಂಗಮ
ಸೊಂಪಾದ ಕಾಡಿನಲಿ ಸುಳಿದಾಡುತ
ಇಂಪಾದ ಕಲರವವ ಕೇಳುತ
ನಡೆದೆ ನಾನು ಹಾಯಾಗಿ
ವೀಕ್ಷಿಸಿದೆ ನಾನು ಹಿತವಾಗಿ

ಮನ ಮಿಡಿದಿದೆ ನೋಡಲು ಅರಮನೆಯೊಂದು.
ಕಂಡೆನಾ ತಾರಾ ಅಪ್ಸರೆಗಳ ಸಂಗಮವೊಂದು.
ಶೃಂಗರಿಸಿದೆ ಹೊಳೆವ ಬೊಕ್ಕೆ ಗಳ
ಮಿಂಚು ದುಂಬಿಯೊಂದು.
ಸ್ಪರ್ಶಿಸಲು ಹೊಳಪನು ಏರಲೇ ಏಣಿಯೊಂದು.

ಬಾನಿನಂಗಳದಿ ಆಟವಾಡಲು ಚಡಪಡಿಸಿದೆ.
ಚಂದ್ರನ ಪುಟಿಪುಟಿದಾಡಿಸಲು ಕೈ ಹಾತೊರೆದಿದೆ.
ಅಪ್ಸರೆಗಳ ಹೊಳಪಿನ ನಗೆಯ ಕಂಡು
ಚಂದ್ರನು ನಾಚಿ ಮುನಿಯುವಂತಿದೆ.

ಹೇಗೆ ನಾ ಹೇಳಲೀ...... ತಾರಾ ಸಂಗಮವ ನೋಡುತಲಿ.

ಹೇಗೆ ನಾ ಬಣ್ಣಿಸಲೀ...... ಸೌಂದರ್ಯವ
ಈ ಸೊಂಪಾದ ರಾತ್ರೀಯಲಿ



© Altaf mulla