...

10 views

"ಕಣ್ಣೀರಿನ ಕಡಲು....
"ಬದುಕಿಹೆನೋ
ನೆಪ ಮಾತ್ರದಿ

ಏತಕೋ ಅರಿಯೆನು
ಮನದ ನೋವದಿ

ನೀನಿಲ್ಲದ ಈ ಕ್ಷಣ
ಎನ್ನ ದುರ್ವಿದಿ

ಕಣ್ಣ ಹನಿಗಳು ಜಾರವು
ಮರೆಯದ ನೋವದಿ

ಏತಕೋ ನಲ್ಲ
ಜೀವನವು ಬೇಡೆನಗೆ

ನೀನಿಲ್ಲದ ಈ
ಒದ್ದಾಟದ ಬದುಕಿಗೆ

ಸಾಕಿದು ಒಂಟಿತನವು
ಕಾದಿಹೆ ನಿನ್ನ ಕರೆಗೆ

ಸಲ್ಲದು ಸಮಯದಿ
ಪ್ರೇಮದ ಬೆಸುಗೆಗೆ

ಎಲ್ಲವೂ ಮಾಯವು
ಜೀವನ ಯಾತ್ರೆಯೊಳಗೆ

ಕಂಬನಿ ಮಿಡಿದಿದೆ
ಕಣ್ಣ ಹನಿಯ ಈ ಬಗೆ

ಒಡಲಲಿ ಬೆಂಕಿಯ
ತಾಪವು

ಬದುಕಲಿ ಎಂದೂ
ಮುಗಿಯದ

ನೋವಿನ ಈ ಅಳಲು
ಜೀವನ ಕಣ್ಣೀರಿನ ಕಡಲು...,✍
😭shobha😔