...

11 views

ರಾಧಾಕೃಷ್ಣ ರ ಪ್ರೀತಿ
ರಾಧಾಕೃಷ್ಣರ ಪ್ರೀತಿ
***************
ಕೊಳಲನೂದಿ ಸೆಳೆದೆ ರಾಧೆಯ ಗೋಪಬಾಲನೇ
ಮನದೊಳಗೆ ಪ್ರೀತಿ ದೀಪ ಹಚ್ಚಿದ ರಾಧೆ ಮಾಧವ
ರಾಧೆಯೊಲುಮೆಯಲ್ಲಿ ಗೆಲುಮೆ ಕಂಡ ಶ್ಯಾಮ
ಅವಳೆಂದರೆ ಶ್ಯಾಮನ ಪ್ರೇಮಕ್ಕೆ ಸಾಕ್ಷಿಯಾದ ಜೀವ|೧|

ರಾಧೆಗೂ ಶ್ಯಾಮನೆಂದರೆ ಎಂತಹ ಸೆಳೆತ ಆಕರ್ಷಣೆ
ಈ ಮುರಳಿಯ ಗಾನಕ್ಕೆ ಮನಸೋತು
ಭಕ್ತಿಯಲ್ಲಿ ಮುಳುಗಿಹಳು
ಶ್ಯಾಮನ ಕೊಳಲ ಮಾಧುರ್ಯಕ್ಕೆ ಗೆಜ್ಜೆ ಕಟ್ಟಿ ನರ್ತಿಸುತ್ತಾ
ಕೃಷ್ಣನ ಪ್ರೀತಿ ಭಾವದೊಳು ರಾಧೆ ಪರವಶಳಾದಳು|೨|

ಸಾವಿರ,ಸಾವಿರ ಗೋಪಿಕೆಯರ ಮನ ಸೆಳೆದರೂ
ರಾಧೆಯೆಂದರೆ ಶ್ಯಾಮನಿಗೆ ಎಲ್ಲಿಲ್ಲದ ಪ್ರೀತಿ ಸೆಳೆತ
ತನ್ನ ಕೊಳಲ ನಾದದಲ್ಲೇ ಅವಳ ಮೆಚ್ಚಿಸಿದವ
ರಾಧೆಯ ಮುದ್ದು ಪ್ರೀತಿಗೆ ಮರುಳಾಗಿ ಆದನವ ವಿಚಲಿತ|೩|

ರಾಧಾಕೃಷ್ಣರ ಪ್ರೀತಿಯಾಯಿತು ಎಲ್ಲೆಲ್ಲೂ ಪ್ರಚಲಿತ
ಇಡೀ ಜಗತ್ತಿನಲ್ಲಿ ಪ್ರೇಮಕ್ಕೆ ಹೆಸರಾದರು ರಾಧೆ ಮಾಧವ
ಕೃಷ್ಣನ ಕೊಳಲನಾದದಲ್ಲೇ ರಾಧೆಯ ಪ್ರೇಮವೇ ಝೇಂಕರಿಸುತ್ತಾ
ಒಲವ ಬೃಂದಾವನದಲ್ಲಿ ಪ್ರೀತಿಯಲೆಯ ಹೊಮ್ಮಿಸಿದೆ ಭಾವ|೪|

ಮಾಧವನ ಪ್ರೀತಿ ಹೃದಯದ ಕಣ್ಣು ರಾಧೆ
ಬಾಲ್ಯದ ಗೆಳತಿಯ ಸಾಂಗತ್ಯದಲ್ಲೇ ಖುಷಿ ಕಂಡವ
ಪರಮಾತ್ಮನಾದರೂ ಪ್ರೇಮದ ಮಹತ್ವ ಸಾರುತ್ತಾ
ರಾಧೆಯನ್ನು ಹೃದಯದೊಳಿಟ್ಟು ಭಕ್ತಿಯಿಂದ ಪೂಜಿಸಿದವ|೫|