...

14 views

ಮಿಡಿಯುತ್ತಿದೆ ಮನಸು
ಅಂದದಪ್ಸರೆಯ ನೋಡಿ ನಯನಕ್ಕೆ ಆಮೋದ
ನುಡಿಯನ್ನು ಕೇಳಿ ಕರ್ಣಕ್ಕಾಗುವುದು ಆಹ್ಲಾದ
ನಿನ್ನ ನೋಡಿ ಮನದಲಿ ಚಿಮ್ಮುವುದು ಪ್ರಮೋದ
ನಳಿನಾಕ್ಷಿಯ ವಯ್ಯಾರಕ್ಕೆ ತಂಪಾದ ದಿನನಂದ||1||

ಹೃದಯದ ಪ್ರತಿ ಬಡಿತದಲ್ಲಿ ನಿನ್ಹೆಸರು
ಪ್ರತಿರಾತ್ರಿ ಕನಸಿನಲ್ಲಿ ನಿನ್ನದೇ ಒಸರು
ಚಿತ್ತದಲ್ಲಿ ಅಚ್ಚೊತ್ತಿದೆ ನಗುವ ಮೊಹರು
ತನು ಮನದಲ್ಲೆಲ್ಲಾ ನಿನ್ನಂದವು ಹಸಿರು||2||

ನೋಟದಂಬುವಿನಿಂದ ಬೇಸರ ಮುಕ್ತ
ನಗುವಿನ ಸಿಂಚನದಿಂದ ಆನಂದ ಸಿಕ್ತ
ಕೋಮಲಹೃದಯ,ವಚನದಿಂದ ವ್ಯಕ್ತ
ನಿನ್ನಂದವ ಆರಾಧಿಸುವ ಪರಮ ಭಕ್ತ ||3||

ನಿನ್ನಂದ ದೇವಗಣಕ್ಕೂ ಸೋಜಿಗ
ಮನ್ಮಥನಿಗೂ ರೂಪದಿಂದಾವೇಗ
ರತಿಗೀಗ ಕಾಡುತಿಹುದು ಉದ್ವೇಗ
ದಿವಿಯಲ್ಲಿ ಆಸುರ ನೆಲೆಸಿತು ಆಗ||4||
© ಗುಡ್ಗೆಪೋರ
#ಕನ್ನಡ #ಪ್ರೇಮ #ಪ್ರೀತಿ #love #Shayari #poem