ನದಿ
ಶಾಂತ ಚಿತ್ತದಿ ಹರಿಯುತಿದೆ ನದಿ
ಎಲ್ಲ ಕಳೆಯನ್ನು ಒಡಲಿನಲಿ ಇಟ್ಟು
ಸಾಗುತ್ತ ಒಮ್ಮೆ ಹನಿಗಣ್ಣಾಗಿ
ಮತ್ತೊಮ್ಮೆ ಬಿಕ್ಕಿ ಬಿಕ್ಕಿ...
ನೆಲಕೆ ಅಮೃತವಾಗಿ
ಜೀವಿಗೆ ಜೀವಾಮೃತವಾಗಿ
ಬಾನಿಗೆ ಬಸಿರುಬಯಕೆಯಾಗಿ
ಹರಿಯುತಿದೆ ನದಿ ನಿರಂತರವಾಗಿ...
ಹಾದಿಬದಿಯಲಿ ಮುಳ್ಳು ತುಳಿದು
ಸುಟ್ಟಹೆಣಗಳ ಬೂದಿ ಬಳಿದು
ಅರೆಬೆಂದ ದೇಹಗಳ ಬಳಿಗೆಳೆದು
ಬಳಲಿದಂತೆ ನದಿ...