...

8 views

ಅಂದು - ಇಂದು
ಅಂದು
ಮನೆಯ ಮೂಲೆ,
ಮೂಲೆಯಲ್ಲಿ ಹುಡುಕಿ,
ಸಾಸಿವೆ ಡಬ್ಬಿಯಲ್ಲಿ, ತಡಕಿ!
ಸಿಕ್ಕ ಪುಡಿಗಾಸಿನಲ್ಲಿ ,
ದಿನಸಿ ತಂದು ಮಾಡಿದ,
ಅಡುಗೆಯನ್ನು ಮನೆಯವರೆಲ್ಲ,
ಒಟ್ಟಿಗೆ ಕುಳಿತು ಹಂಚಿ ತಿನ್ನುತ್ತಿದ್ದ.
ಬಡತನದ ದಿನಗಳ,
ಆ ನೆಮ್ಮದಿ!.

ಇಂದು
ಹೋಟೆಲ್, ರೆಸ್ಟೋರೆಂಟ್
ಪಂಚತಾರಾ ಹೋಟೆಲ್,
ರೆಸಾರ್ಟ್ ನ ಪಾರ್ಟಿ ಹಾಲಿನಲ್ಲೊ,
ಖಾಸಗಿ ಕೋಣೆಯಲ್ಲೊ,
ಕುಳಿತು ಸವಿಯುವ,
ಸಾವಿರಾರು ರೂಪಾಯಿಯ,
ಮೃಷ್ಟಾನ್ನ ಭೋಜನದ,
ಐಷಾರಾಮಿ ಜೀವನ ಶೈಲಿಯಲ್ಲಿ,
ಕಾಣೆಯಾಗಿದೆ!!
© ಮಂಜುನಾಥ್.ಕೆ.ಆರ್