...

14 views

ಕಾಣದ ದೇವರಿಗೊಂದು ಪ್ರಾರ್ಥನೆ
ನಿತ್ಯ ಪೂಜೆ, ಪುನಸ್ಕಾರ, ಮೆರವಣಿಗೆ
ಕಾಣದ ದೇವರಿಗೇಕೆ ಈ ಗದ್ದುಗೆ.
ಬದುಕಲು ಪ್ರಯತ್ನಿಸದೆ ಹೊರಡುವ ಈ ಬುದ್ಧಿಗೆ.
ಏಕೀ ಪೆದ್ದತನ ದೇವರ ಹಪ ಹಪಿಸುವ ಜನರಿಗೆ.

ಪಂಚಬೂತಗಳೆಲ್ಲವಿತ್ತರೂ ಆಸೆ ಎಂಬ ಮಾಯೆಗೆ ತೃಪ್ತಿಯಿಲ್ಲ.
ಮನುಜನೆಂಬ ಮುಖಕೆ ಮುಖವಾಡ ಧರಿಸಿ ಜಗವೇ ನಾಶ ಹೊಂದುವುದಲ್ಲ.
ಸೃಷ್ಟಿಕರ್ತ ನೆಂದು ಬೀಗುವ ಈ ಜನರಿಗೆ ಅದು ಹಾಳಾಗುವುದೆಂಬುದು ತಿಳಿಯುತ್ತಿಲ್ಲ.

ಕಾಣದ ದೇವರಿಗೊಂದು ಪ್ರಾರ್ಥನೆ ಏಕೆ.

ಮೋಸ, ವಂಚನೆ , ಭ್ರಷ್ಟ ಕೈಯಿಂದ ನಮಿಸುವವರು ನಾವು.
ಅಹಂಕಾರವೆಂಬ ಧೂಳಿನಿಂದ ದೇವರ ಶಿಲ್ಪವನು ತೊಳೆವವರು ನಾವು.
ಶೃಸ್ಟಿಕರ್ತ ನ ಜೀವಿಗಳ ಬಲಿ ತೆಗೆದ ರಕ್ತದ ಹಣೆ ಬೊಟ್ಟು ಇಡುವವರು ನಾವು.
ಹಲವು ಶಾಪಗಳ ಬಟ್ಟೆಯ ನೇಯ್ದುಕೊಂಡು ಜರ್ಜರಿಯಾಗಿ ಧರಿಸಿ ದೇವರ ಜಾತ್ರೆಯ ಮಾಡುವವರು ನಾವು.
ವಿವಿಧ ಧರ್ಮಗಳ ವಿಂಗಡಿಸಿ ದೇವರ ಹೃದಯವನ್ನೇ ಸೀಳಿಬಿಡುವವರು ನಾವು.

ಮತ್ತೇಕೆ ಕಾಣದ ದೇವರಿಗೊಂದು ಪ್ರಾರ್ಥನೆ.


© Altaf mulla