...

9 views

ಅನೈತಿಕ!
ಪೊರೆದ ಗಂಡನ ತೊರೆದು,
ಕ್ಷಣಿಕ ಸುಖವನು ಬಯಸಿ,
ಹೊರಟ ಸತಿ, ಸಿಲುಕಿಹಳು,
ಜಾಲತಾಣದಿ ಸಿಕ್ಕ, ಸಖನ ಜಾಲದೊಳಗೆ!!

ಅಗ್ನಿ ಸಾಕ್ಷಿಯ ಜೊತೆಗೆ,
ಕೊಟ್ಟ ಮಾತದು ಅಂದು,
ಮರೆತು ಮಲಗಿಹಳಿಂದು,
ಸಖನ ತೋಳ ತೆಕ್ಕೆಯೊಳಗೆ!!

ಜನುಮ ಜನುಮದ ನಂಟು,
ಬ್ರಹ್ಮ ಹಾಕಿದ ಗಂಟು.
ಸುಟ್ಟು ಕರಗಿದೆ, ಅನೈತಿಕ
ಜ್ವಾಲೆಯೊಳಗೆ!!.
© ಮಂಜುನಾಥ್.ಕೆ.ಆರ್