...

4 views

ಒಂದಾನೊಂದು ಕಾಲದಲ್ಲಿ...
ಒಂದಾನೊಂದು ಕಾಲದಲ್ಲಿ,
ಹಳೇಬೀಡಿನ, ಹಳೆಯ ಬೀದಿಯಲಿ,
ಹಳೇಹಾಡಿನ ರಾಗದಲಿ,
ಹಾಡುತ್ತಾ ಹೊರಟಳು ಹುಡುಗಿ ಮಲ್ಲಿ!

ಮಲ್ಲಿಯ ಚೆಲುವು ಹೇಗೆ ತಾನೆ ವರ್ಣಿಸಲಿ?
ಅವಳ ಚೆಲುವನ್ನು ಕಂಡು, ನಾಚಿಕೊಂಡು, ಮೆಲ್ಲನೆ ಮಲಗುತಿದ್ದವು ಹೂಗಳು ಬುಟ್ಟಿಯಲಿ.
ಹೂಗಳ ಪರಿಮಳವು ಬೆರೆತು ಹೋಗುತಿತ್ತು
ಅವಳ ಹಾಡಿನ ರಾಗದಲಿ.

ಒಂದಾನೊಂದು ಕಾಲದಲ್ಲಿ,
ಹಳೇಬೀಡಿನ, ಹಳೆಯ ಬೀದಿಯಲಿ,
ಹಳೇಹಾಡಿನ ರಾಗದಲಿ,
ಹಾಡುತ್ತಾ ಹೊರಟಳು ಹುಡುಗಿ ಮಲ್ಲಿ!

ಸದ್ದು ಮಾಡಿತೊಂದು ಗಾಳಿಯಲಿ,
ಬಳ್ಳಿಯಲ್ಲಿ ಅಡಗಿ ಕುಳಿತಂತಹ ಹಲ್ಲಿ.
ಕೇಳಿದಂಗಾಯ್ತು ಅವಳಿಗೆ --
ನೀನು ಎಲ್ಲಿಗೆ ಹೊರಟೆ ಮಲ್ಲಿ?
ಹುಡುಗಿಯು ಹುಡುಕಿದಳು ಅಲ್ಲಿ-ಇಲ್ಲಿ.
ಅಲ್ಲಾಡಿತು ಅವಳು ಹಿಡಿದುಕೊಂಡಿದ್ದ ಬಳ್ಳಿ!

ಪ್ರಶ್ನಿಸಿದಳು ಅದಕ್ಕೆ -- ಈ ಪ್ರಶ್ನೆ ಕೇಳಿದವಳು ಯಲ್ಲಿರುವಳೋ ಆ ಕಳ್ಳಿ?
ಹಲ್ಲಿ ನುಡಿಯಿತು --
ನಾನಿರುವೆ ನೀ ನಿಂತಿದ್ದ ಜಾಗದಲ್ಲಿ.
ಸುಮ್ಮನೆ ಏಕೆ ಹುಡುಕುತ್ತಿರುವೆ,
ಒಣ ಹುಲ್ಲಿನ ಕೊಂಪೆಯಲಿ?
ಇಗೋ ಬಂದಿರುವೆ ನಿನ್ನ ಪಾದ ದಡಿಯಲಿ.
ನೋಡಿದಳು ಆ ಹಲ್ಲಿಯನು ಗಾಬರಿಯಲಿ,
ಹೆದರಿ ಓಡಿಯೇ ಹೋದಳು ಕೈಯಲ್ಲಿರುವ ಮಲ್ಲಿಗೆ ಹಲ್ಲಿಯ ಮೇಲೆ ಚೆಲ್ಲಿ!

ಒಂದಾನೊಂದು ಕಾಲದಲ್ಲಿ,
ಹಳೇಬೀಡಿನ, ಹಳೆಯ ಬೀದಿಯಲಿ,
ಹಳೇಹಾಡಿನ ರಾಗದಲಿ,
ಹಾಡುತ್ತ ಹೊರಟೇಬಿಟ್ಟಳು ಹುಡುಗಿ ಮಲ್ಲಿ.


© Archana Kuratti