...

3 views

ನಮ್ಮ ಪ್ರಕೃತಿ ಮಾತೆ
ಇವಳೇ ನಮ್ಮ ಸೊಬಗಿನ ಪ್ರಕೃತಿ ಮಾತೆ
ನಮ್ಮನ್ನು ಸಂರಕ್ಷಿಸುವ ಒಲವದಾತೆ
ಗಾಳಿ, ಬೆಳಕು,ನೀರು, ಹಸಿವ ನೀಗುವ ಪ್ರಾಣದಾತೆ
ಅಮ್ಮನಂತೆ ಪೊರೆಯುವ ಮಹಾಮಾತೆ//

ಆದರೆ ಅವಳ ಮುಖದಲ್ಲೇಕೊ ಇಂದು
ಮೂಡಿದೆ ಬೇಸರ ಛಾಯೆಯ ಬಿಂದು
ನಮ್ಮೆಲ್ಲರ ತಾತ್ಸಾರಕ್ಕೆ ಅವಳು ನೊಂದು ಬೆಂದು
ಹಾಕುತ್ತಿರುವಳು ಎಲ್ಲರಿಗೂ ಶಾಪವಿಂದು//

ಭೂಮಾತೆಯ ಮಡಿಲಲ್ಲಿ ತುಂಬಿಸಿದ್ದೇವೆ ಪ್ಲಾಸ್ಟಿಕ್ ಕಸ
ಮರಗಳ ಕಡಿದು ಮಾಡಿರುವೆವು ಅವಳ ನಾಶ
ಬಿಸಿಲ ದಗೆಯಲ್ಲಿ ಬೆಂದು ಕಾರುವಳು ವಿಷ
ಹೀಗೆ ಅವಳ ಸಂರಕ್ಷಿಸದಿದ್ದರೆ ನಾವು ವಿನಾಶ//

ದಿನೇ ದಿನೇ ಕೂಗುವಳು ಅವಳ ಕಾಪಾಡಲು
ಗಿಡ ಮರಗಳ ನೆಟ್ಟು ಸಂರಕ್ಷಿಸಲು
ತನ್ನ ಒಡಲನ್ನು ಸದಾ ಹಸಿರಾಗಿಸಲು
ಆದರೆ ನಮಗೆ ಕೇಳದಾಯ್ತೇ ಅವಳ ಅಳಲು//

ಇನ್ನು ಮುಂದಾದರು ಎಚ್ಚೆತ್ತುಕೊಳ್ಳುವ ನಾವು
ಭೂತಾಯಿಯ ಮಡಿಲಿಗೆ ತುಂಬುವ ಹಸಿರ ನಗುವು
ಎಲ್ಲರಲ್ಲೂ ಬೆಳೆಸುವ ಪ್ರಕೃತಿಯ ಒಲವು
ಪ್ರಕೃತಿ ಮಾತೆಗೆ ಕೋರುವ ನಾವಿಂದು ಶುಭಾಶಯವು//