...

3 views

ಹಾಗೆ ಸುಮ್ಮನೆ......
ಹೀಗೆ ಕೊನೆಯಿಲ್ಲದ,ಗುರಿಯಿಲ್ಲದ ಪಯಣದಲಿ
ಸುತ್ತಲ ಗದ್ದಲದೊಳು ಮೌನದೊಂದಿಗೆ ನನ್ನ ಗೆಳೆತನ
ಸಾಗುವ ಬಸ್ಸಿನ ಗಾಲಿಯೊಡನೆ ಸವಿನೆನಪುಗಳು ಸ್ಮೃತಿಪಟಲದಲ್ಲಿ ಹಿಡಿತಕ್ಕೆ ಸಿಗದಂತೆ ಸಾಗುತಿದೆ
ಜೊತೆಗೆ ಸುಮಧುರ ಸಂಗೀತ ಕರ್ಣಗಳಿಗೆ ಇಂಪನ್ನು ತುಂಬುವಲ್ಲಿ ಯಶಸ್ವಿಯಾಗಿದೆ
ಬೀಸುವ ತಂಗಾಳಿ ಸಣ್ಣಗೆ ಜಿನುಗುತಿರುವ ವರುಣನೊಂದಿಗೆ ಸ್ನೇಹ ಬೆಸೆದುಕೊಂಡಿದೆ
ಭೂಮ್ಯಾಕಾಶದ ಪ್ರೀತಿಯ ಸಮಾಗಮಕೆ ಪ್ರಕೃತಿ ಕಾತರಗೊಂಡಿದೆ