...

1 views

ಭ್ರಮೆಯ ಹುಡುಗಿ.
ಅಂದಕ್ಕೆ ರೂಪಕವೊ
ಚೆಂದಕ್ಕೆ ಪ್ರೇರಕವೊ!
ನಾನೆ ರೂಪವತಿ ಎಂಬ,
ಭ್ರಮೆಯ ಧ್ಯೋತಕವೊ!!

ಕಣ್ಣ ಸನ್ನೆಯ ಸೆಳೆತ,
ನೋಟದಲಿ ಅದ ಮಿಳಿತ,
ಸಿಲುಕಿಸುವೆ ಎಂಬ ಭ್ರಮೆ!!
ಸೆಳೆವ ನೋಟದ ಸುಳಿಗೆ.

ಏನು ಹೇಳಲಿ ಹುಡುಗಿ,
ಬಿಗುಮಾನದಾ ಬೆಡಗಿ!

ಮತಿ ಇಲ್ಲ, ಇತಿ ಇಲ್ಲ,
ವಾಸ್ತವತೆ ಅರಿವಿಲ್ಲ.
ಲೋಕ ಜ್ಞಾನದ ಅರಿವು!!
ಇನ್ನು ತಿಳಿದಿಲ್ಲ.
© ಮಂಜುನಾಥ್.ಕೆ.ಆರ್