...

21 views

ಗಜಲ್
ಸಿಡುಕಿಗೂ ಶೀತಲ ತಾಕಿಸುವ ಮಾತಿನ ಮಲ್ಲ
ಅಳುವಿಗೂ ನಲಿವು ಲೇಪಿಸುವ ಮಾತಿನ ಮಲ್ಲ

ಸಂತಸದ ಕ್ಷಣಗಳ ಕಲೆಹಾಕುವ ನಿಸ್ಸಿಮನಿವ
ದುಃಖಕೂ ಆನಂದ ಸೋಕಿಸುವ ಮಾತಿನ ಮಲ್ಲ

ತುಸು ಹೆಚ್ಚೇ ಕಾಡುವುದು ಸದ್ದಿಲ್ಲದೆ ಗತ ಕಾಲ
ಬೇಸರಕೂ ವಿನೋದ ಕಲಿಸುವ ಮಾತಿನ ಮಲ್ಲ

ಬೇರೆಲ್ಲಾ ನೋವು ಶೂನ್ಯ ಅವನೊಲವ ಕಂಡು
ಸಂಕಟಕೂ ಸಂಭ್ರಮ ತರಿಸುವ ಮಾತಿನ ಮಲ್ಲ

ಸುಮ ಬಾಡಿದರು ಕಂಪು ಪಸರಿಸದೆ ಇರದು
ಸಾವಿಗೂ ಅಮೃತ ಕುಡಿಸುವ ಮಾತಿನ ಮಲ್ಲ