...

8 views

my best poems
"ಮುಡಿಗೆ ಮಲ್ಲಿಗೆ ಮುಡಿದು...

ಮುಡಿಗೆ ಮಲ್ಲಿಗೆ ಮುಡಿದು
ನಿನ್ನನೊಲ್ಲದ ನಲ್ಲನ ಹಿಂದೆ
ಎಲ್ಲಿಗೆ ಹೊರಟಿರುವೆ ನಲ್ಲೇ?
ಎತ್ತಲೆತ್ತಲೋ ಚಿತ್ತ
ಸಿಗದ ಪ್ರೀತಿಯ ಮುತ್ತ
ಹುಡುಕಿ ನಾ ಸೋತೋದೆ ನಲ್ಲೇ...

ಸುಡುವ ಬಿಸಿಲಿನ ಕುದಿಯಲಿ
ನಡೆವ ದಾರಿಯ ಹಗೆಯದು
ನಿನ್ನ ಪಾದಧೂಳಿಯೂ ನನ್ನ ವದನಕೇರಿತಲ್ಲೇ...
ಹರುಷ ವರುಷಗಳ ಕಂಡಿದ್ದು
ಮನದ ಮಾತೊಂದು ಮುರಿದು ಬಿದ್ದಿತ್ತು
ನಾ ಕಂಡ ಕನಸುಗಳೆಲ್ಲ ಚಿತೆಯೇರಿತಲ್ಲೇ...

ಎನು ಇಲ್ಲೆನುತ ಮಿಡಿದ ಮನ ನಿನದು
ಬಾಡೋ ಭಾವಗಳ ಹೊತ್ತು ನಡೆದವಳು
ನಿನ್ನ ಚಿತ್ತವೆಲ್ಲಿ ಕಳೆದಿಹುದು ನಲ್ಲೇ?
ಒಲ್ಲೆ ಎನುವವನ ದಾರಿಯನು ಹಿಡಿದು
ಬಲ್ಲೆ ನಾ ಎಲ್ಲಾ ಹಗೆಯ ತನು ನಿನದು
ನನ್ನ ಪ್ರೀತಿಯನೇ ಒಪ್ಪದೇಗಿಹೆ ನಲ್ಲೇ?

ಕೊನೆಯ ಮಾತೊಂದು ಹೇಳಲು ಈಗ
ಎರಡು ಮೈಲಿಗಳ ದಾಟಿ ಬಂದಿರುವೆ
ಪ್ರೇಮಗಣ್ಣನು ಮುಚ್ಚಿ ಹಗೆಯ ತೋರದಿರು ನಲ್ಲೇ...
ಹುಚ್ಚ ನಾನೊಬ್ಬ ನಿನ್ನ ಪ್ರೀತಿಯೊಳಗಿರಲು
ಜಾತಿಹುಚ್ಚನು ಮೆಚ್ಚಿ ಎತ್ತ ಹೊರಟಿರುವೆ
ಹೊತ್ತು ಹೋಗುತಿದೆ ಕುಳಿತು ಯೋಚಿಸು ನಲ್ಲೇ...

✍️ ಅಲೆಮಾರಿ
*****************************
"ಕೃಷ್ಣನ ಕನಸು"

ಎನ್ನ ಕನಸುಗಳೆಲ್ಲ ಮರಳಿನುಂಡೆಗಳಂತೆ
ಎಚ್ಚರದೊಳೆನ್ನಾರು ಎಣಿಸಲಾಗದಯ್ಯ
ಎತ್ತರ ಬಿತ್ತರದಿ ಕುಣಿದು ಬಂದೆ ನಾನು
ಕೃಷ್ಣಗನಸಿಂದೆನ್ನ  ತಡೆಯಲಾಗದಯ್ಯ

ಪಿಳ್ಳಂಗೋವಿಂಪಿಡಿದ ಪಿಳ್ಳೆಲೋಲ ನಾನೇ
ಹಾದಿ ಬೀದಿ ಜನ ಪಿಳ್ಪಿಳಿ ನೋಡಿಹರಯ್ಯ
ಎನ್ನಾಗಮ ನೆನೆದು ಹೊಸರಂಗು ಬಿದಿಗಳೆಲ್ಲ
ರಂಗಿತ್ತೆಂಗಳೆಯರು ಕಾದು ನಿಂತಿಹರಯ್ಯ

ರಂಗಿನೊಂಬೆಗಳು ಸಿಹಿಯ ತಿಂಡಿಗಳು
ಸಿಗದ ಬೆಣ್ಣೆಯನ್ನರಸಿ ನಾನಿಂತೆನಯ್ಯ
ಕಣ್ಣ ತಂಪಿನಲ್ಲಿ ಊರ ಓಕುಳಿಯೂ
ಹಿಂದು ಮುಂದೆಂದೂ ನೋಡೆನಯ್ಯ

ಊರ ಬಾಗಿಲಲೆನ್ನ ರಾಧೆಯಿಂತಿಹಳೆಂದು
ಓಡೇ ಕೊಳಲನ್ನಿಡಿದು ರಾಗದಿಂಪಿಲ್ಲಯ್ಯ
ರಾಧರಾಣಿ ಅಲ್ಲ ಕಂಡಳಿಂಕದ ರಮಣಿ
ಘಾಸಿ ಹೋದಳೆನ್ನ ತಿರುಗಿ ತಿರುಗಯ್ಯ

ಕನಸು ಕಣ್ಮುತ್ತಾಗಿ ಜಾರಿ ಕರೆಯುತ್ತಿರಲು
ಜಾರಿದನಿಯಿಡಿದು ನೋಡಲಾರೆನಯ್ಯ
ವಿರಹ ಸಹಿಸೆಂದೆನಗೆ ಭಾದೆಯೋರೆಸಿದವ
- ಳ ನಿಜದ ಕಹಿಸತ್ಯ ಮರೆಯೋದೆಗಯ್ಯ

✍️ ಅಲೆಮಾರಿ
**************************



"ಕಾಮನಬಿಲ್ಲು"
..........................
ಅತ್ತ ನೇಸರನಾಟ ಇತ್ತ ಜವರನ ಓಟ
ಅವನಿಗೆ ಮುದತರುವ ಸುಂದರ ನೋಟ
ಸಪ್ತರಂಗಿನ ಬಣ್ಣಗಳ ರಮಣೀಯ ನೋಟ
ಎನ್ನಲದೇನೋ ಮಧುರ ಸಿಂಚನದ ಪಟ

ನಾ ಬರುವ ದಾರಿಗೆ ರಂಗುಚೆಲ್ಲಿ
ದೂರದಿ ಭುವಿಗೆ ನಮಿಸಿ ನಿಂತಂತೆ
ಇದೇನು ಬಣ್ಣದ ಹೊಳೆಯೋ
ಇಲ್ಲ ನಭಕೇರಿಸೋ ಸುಳಿದಾರಿಯೋ

ಒಮ್ಮೆ ನಡೆಯಬೇಕಿದೆ ಆ ರಂಗುದಾರಿಯಲ್ಲಿ
ಆ ಬಣ್ಣ ತಂದು ಎನ್ಮನೇಗೆ ಬಳಿದು
ನಲಿಯಬೇಕಿದೆ ಒಮ್ಮೆ ಮನದಲ್ಲಿ
ಖುಷಿಪಡಬೇಕಿದೆ ಕುಳಿತು ರಂಗಮಂಚದಲ್ಲಿ

ಯಾವ ಕವಿಗಾರನ ಕುಂಚ ಅಲ್ಲಿ ಕುಣಿಯಿತೋ
ಯಾವ ಕವಿಗಾರನ ಮಂಚ ಅಲ್ಲಿ ತೂಗಿತೋ
ಯಾವ ಮನಸೆಳೆವ ಬಯಕೆ ನನ್ನ ಕಾಡಿತೋ
ನನ್ನಲೇಕೆ ಅದಪಡೆವ ಕಿಡಿಹುಟ್ಟಿತೋ ನಾ ಕಾಣೆ

ಎಷ್ಟು ಹಣ ಕೊಡಬೇಕೋ ಆ ಝಣ
- ಝಣ ಬಣ್ಣಗಳ ಸವಿ ಸವಿಯಲು
ಎಷ್ಟು ದಿನ ಕಾಯಬೇಕೋ ಅದನನ್ನ
ಗೃಹದಲಿಟ್ಟು ಗಂಧದೂಪ ಹಾಕಲು

ಈ ಸಂತಸವ ಸವೆಯುತ ನನ್ನ ನಾ ಮರೆಯಲು
ಎಂಥ ಸಂತಸದಿ ಮುಳುಗಿದೆಯೋ ಕೃಷ್ಣಪ್ರಿಯಾ
ನಿನ್ನ ನೋಡಿ ಕಲಿಯಬೇಕಿದೆ ಜಗ
ಸಂತಸದ ಹೊನಲಿನ ಸೋಗ
ಆಗಲು ಕೃಷ್ಣಪ್ರಿಯನ ಭಾಗ

✍️ಅಲೆಮಾರಿ
**************************
"ಕಣ್ಣು ಕಾಣದ ಗಾವಿಲರೋ ನಾವು"

ಕಣ್ಣು ಕಾಣದ ಗಾವಿಲರೋ ನಾವು
ಮಣ್ಣು ಸೇರುವ ಮುನ್ನ ಅರಿಯೇವೋ
ಚಿನ್ನ ಹೋನ್ನಿನ ಬೆನ್ನು ಹತ್ತಿ
ಹೆಣ್ಣಿನ ಮೇಲೆ ದರ್ಪವೆತ್ತಿ
ಏನು ಅರಿವೇವು ಮಾನವೋಗುದ
ಕತ್ತಲಾಗುದು ಜೀವನ
ಕಣ್ಣು ಕಾಣದ ಗಾವಿಲರೋ... ನಾವು
ಕಣ್ಣು ಕಾಣದ ಗಾವಿಲರೋ...
...