...

8 views

ಮೊದಲ ಪ್ರೀತಿ
ಮೊದ ಮೊದಲ ಪ್ರೀತಿ ಎಲ್ಲರಿಗೂ
ಶಾಲೆಯಲ್ಲಿರುವಾಗಲೇ ಆಗೋದು
ಅದ್ಯಾವತ್ತೂ ಎಲ್ಲರಿಗೂ ಸಿಗುವುದೇ ಇಲ್ಲ
ಉಳಿಯುವುದು ಕೇವಲ ನೆನಪಿನ ಚೀಲ
ನೆನಪಿನ ಚೀಲದಲ್ಲಿ ಬಹಳಷ್ಟು
ನೆನಪುಗಳೇ ತುಂಬಿವೆ
ಕೆಲವೂ ಲಂಚ್ ಬ್ರೇಕಿನವು,
ಕೆಲವು ಬೆಂಚ್ ಮೇಲಿನವು,,,
ಅವನು ಶಾಲೆಯಲ್ಲಿರದಿರುವಾಗ
ನನ್ನದೂ ಶಾಲೆಗೆ ರಜೆಯೇ...
ಅಷ್ಟೇನೂ ಮಾತನಾಡದ ಅವನು
ಆಗಾಗ ನೋಡಿ ನಗುವನು
ಇದನೇ ನೋಡಿ ನಾನೂ ಅರ್ಥೈಸಿಕೊಂಡಿದ್ದೆ
ಆದರೆ ನನ್ನ ಅರ್ಥ ತಪ್ಪಾಗಿತ್ತೆಂದು
ಆಮೇಲೆ ಅರ್ಥವಾಯಿತು...
ಇರಲಿ ಅವನು ನನ್ನ ನೆನಪಲ್ಲೇ ಇರುತ್ತಾನೆ ಈಗ
ಇರುವೆ ನನ್ನ ಸಂಸಾರದಲ್ಲಿ,,,,
ಮನಸಿಂದ ಮಾತ್ರ ಶಾಲೆಯಲ್ಲೇ ಇರುವೆ ಈಗ..!!😍

© S_lines