...

19 views

ನಿನ್ನ ನಿಲುವೇನು
ಬಯಸುತಿದೆ ಎನ್ನ ಮನ
ನಿನ್ನೊಂದಿಗೆ ಇರಲು
ತುಡಿಯುತಿದೆ ಚಿತ್ತ ಭ್ರಮರ
ನಿನ್ನ ಬಳಿ ಹಾರಲು
ಕುಣಿಯುತಿದೆ ಕಮಲಾಕ್ಷಿ
ನಿನ್ನಂದವ ನೋಡಲು
ಅಣಿಗೊಂಡಿದೆ ವಚನವು
ನಿನ್ನೆಸರು ಸ್ತುತಿಸಲು
ಹೃದಯದ ಅಪೇಕ್ಷೆಯು
ಜೊತೆಯಿರಬೇಕು ನಿನ್ನೊಲವು
ನಿನಗೂ ಹಾಗೆನಿಸುವುದೇ
ಅರಹು ಮನದ ನಿಲುವು
© ಗುಡ್ಗೆಪೋರ