...

8 views

ಕುಡಿನೋಟದ ಚೆಲುವೆ.
ಮತ್ತೆ ತಿರುಗಿ ನೋಡುವಂತ,
ಚೆಲುವೆಯಲ್ಲ ಆಕೆ!!
ಆದರು ತಿರುಗಿ ನೋಡುವಂತೆ,
ಸೆಳೆದಿಹಳು ಜಿಂಕೆ ಕಣ್ಣಿನಾಕೆ!!

ಕಣ್ಣ ಸನ್ನೆಯ ಸೆಳೆತ,
ನೋಟದಲಿ ಅದ ಮಿಳಿತ,
ಏರುಪೇರಾಗುತಿದೆ,
ಹುಡುಗರ ಎದೆಬಡಿತ!!

ಹೇಗೆ ವರ್ಣಿಸಲಿ ಚೆಲುವೆ?
ನಿನ್ನ ರೂಪ ರಾಶಿಯನು!
ಪದಗಳಿಗೆ ನಿಲುಕದ,
ಲಾವಣ್ಯ ಪ್ರಭೆಯನು!!

ಆದರೂ ಬರೆದಿರುವೆ ಚೆಲುವೆ,
ನಾಲ್ಕು ಸಾಲಿನ ಕವಿತೆಯನು,

ಅಂದಕ್ಕೆ ರೂಪಕವೊ,
ಚೆಂದಕ್ಕೆ ಪ್ರೇರಕವೊ!
ಕುಡಿ ನೋಟದಿ ಸೆಳೆವ,
ಮಧುರ ಸಮವೊ!

ಹೆಚ್ಚಾಯ್ತು ಚೆಲುವೆ ಇನ್ನೇನು ಹೇಳೆನು,
ಕೊಲ್ಲದಿರು ಹುಡುಗರನು,
ಕಣ್ಣೆಂಬ ಬಿಲ್ಲಿಂದ ಬಿಟ್ಟು,
ನೋಟದಾ ಶರವನು!!

© ಮಂಜುನಾಥ್.ಕೆ.ಆರ್