...

3 views

ನೀನೇ ಬರಬೇಕು
ಹುಚ್ಚೆದ್ದು ಕುಣಿಯುತಿಹ ನನ್ನ ಮನಸ್ಸಿಗೆ ಬಣ್ಣ ಹಚ್ಚೋಕ್ಕೆ ನೀನೇ ಬರಬೇಕು...

ಕಣಕಣದಲ್ಲೂ ನಿನ್ನೇ ನೆನೆಯುತ ಕುಣಿಯುತಿಹ ನನ್ನ ಹೆಜ್ಜೆಗೆ ಗೆಜ್ಜೆ ಕಟ್ಟೋಕ್ಕೂ ನೀನೇ ಬರಬೇಕು...

ಅಂಕೆಯಿಲ್ಲದೇ ಅರಕೆಯ ಹೊರುತಿಹ ನನ್ನ ಅಂಗೈಗೆ ಅಂದದ ಬಳೆ ತೊಡಿಸೋಕ್ಕೂ ನೀನೇ ಬರಬೇಕು...

ಧರಿಸಿದ ಮಲ್ಲಿಗೆಯ ಮೊಗ್ಗಿನ ಜಡೆ ನವಿಲಿನಂತೆ ನಾಚಿ ನಟಿಸಿದಾಗ ಜಾರದಂತೆ ಕಟ್ಟೋಕ್ಕೂ ನೀನೇ ಬರಬೇಕು...

ಕನಸಿನಲ್ಲೂ ಕಾಣದೆ ಕಾಡಿಸುವ ನಿನ್ನ ಕರುಣೆಯನ್ನು ಕಂಡು ಕಣ್ತುಂಬಿಸಿಕೊಳ್ಳಲು ಕಾಯುತಿಹ ನನ್ಮ ಕಣ್ಗಳಿಗೆ ಕಾಮನಬಿಲ್ಲಿನ ಕಾಡಿಗೆ ಹಚ್ಚೋಕ್ಕೂ ನೀನೇ ಬರಬೇಕು...

ಪ್ರತಿ ಮಾಸದಲ್ಲೂ ಮನಸ್ಸಿನ ಮಾನಸದಲ್ಲಿ ಎಬ್ಬಿಸುವ ಚಂಡ ಮಾರುತವನ್ನು ಹುಟ್ಟಿಸುವ ಚಂದ್ರನನ್ನು ತಣಿಸೋಕ್ಕೂ ನೀನೇ ಬರಬೇಕು...

ಜಗದ ಎಲ್ಲಾ ಜಲಧಾರೆಗಳಷ್ಟೂ ಸಮವಾದ ನಮ್ಮ ಜನ್ಮ ಜನ್ಮಗಳ ಅನುಬಂಧ ಈ ವಸುಂಧರೆಯಲ್ಲಿ ಜನಿಸೋಕ್ಕೂ ನೀನೇ ಬರಬೇಕು.
©kavyarsmiley
© All Rights Reserved