...

12 views

ನೋವಲ್ಲಿನ ನಗೆ
ಕವಿತೆ
ರಚನೆ: ಭೃಂಗಿಮಠ

ಗೆಳತಿ
ನಿನ್ನ ಹೃದಯ ನೋವಲ್ಲೂ
ಅರಳುವಾಗ
ಬಂದ ಆನಂದ ಜೇನಿಗಿಂತಲೂ ಸಿಹಿ
ನಿನ್ನ ಮನದಾಳದಲಿ ಬೇರೂರಿದ ಆತಂಕದ ಕತ್ತಲೆ ಹೋಗಿ
ನಿರೀಕ್ಷೆಯ ಬೆಳದಿಂಗಳು ಚಿಮ್ಮಿತು
ಮೌನಮುರಿದು
ಮಾತಾಡುವ ತವಕ ಚಿಡಪಡಿಸಿತು
ಹತ್ತಿರದ ಹೃದಯವೊಂದು ದೂರಾದ ಅನುಭವ ಗೋಚರಿಸಿತು
ಮತ್ತೇಕೆ ಚೇತನ ಶಕ್ತಿಯೇ ಜೊತೆಗಿರುವಾಗ
ನಮಗೆ ನಾನೆ ಶಕ್ತಿಶಾಲಿ
ಯುಕ್ತಿಶಾಲಿ ಎಂದು ಮುನ್ನುಗ್ಗು
ಯಶಸ್ಸು ಮೂರೇ ಮೆಟ್ಟಿಲು
ಘಟ್ಟಿ ಧೈರ್ಯದ ಮನಸ್ಸು ಸದಾ ಹಚ್ಚ ಹಸಿರಾಗಿರಲಿ
ಹೆಸರು ಗಳಿಸಲು
ಗುರಿ ಸಾಧನೆಯ ಶಿಖರವೇರಲು
© Mallikarjun Bhrungimath