...

18 views

🌹 ಕಾಡ ಕುಸುಮ 🌹
"ಕಾಡ ಕುಸುಮ "
🌹🌹🌹🌹🌹
ನೀಲಿಬಾನಲಿ ಬೆಳ್ಮುಗಿಲ ಸಾಲು ತೇಲುತಿರೆ,
ಗಿಡಮರವೆಲ್ಲಾ ಮಲಗಿಹುದು ತಬ್ಬಿಹಿಡಿದ ತಿಂಗಳ
ಬೆಳಕಲಿ.ಮೌನತೆಯ ಸಾರಿಹುದು ಲತೆಬಳ್ಳಿಯು.
ಮರದಡಿ ನಿಂತಿರುವ ಚೆಲುವೆ ಯಾರಿವಳೆಂದು...?
ಶ್ಯಾಮಲವರ್ಣದ ನೀರೆ,ಅಚ್ಚ ಬಿಳುಪಿನ ಸೀರೆಯುಟ್ಟು
ತುಂಬು ಕಳೆ ಕಾಂತಿಯಲಿ,ಧಾವಿಸಿ ಬರುತಿಹಳು,
ತರುಲತೆಯ ಆಶ್ರಯ ಬೇಡುತ ನಿಂತಿಹಳು..!!
ಕಾನನದಿ ತುಂಬ ಜೋ...ಹಿಡಿದ ಮಳೆರಾಯ..
ದಿಕ್ಕು ತೋಚದೆ ಕಾಡದಾರಿಯಲಿ
ಬರುತಿಹಳು ಏಕಾಂಗಿ ಈ ನೀರೆ..!!

ಸದ್ದು ಗದ್ದಲವಿಲ್ಲದ ನೀರವ ಮೌನ ಸುಳಿಗಾಳಿ
ಬೀಸುತಿದೆ, ಮರದ ರೆಂಬೆ,ಕೊಂಬೆ ಅಲುಗಾಡಿಸುತ
ಮೆಲ್ಲನೆ ನಡೆದಿಹಳು ಭೀತಿಯಲಿ.ಹೆಜ್ಜೆ ಸಪ್ಪಳಕೆ ಕಾನನವು ನಗುತಿರೆ.ಸುತ್ತಲೂ ಕಾಣದೆ ಇಣುಕಿ ನೋಡುತಿರೆ
ನನ್ನವನ ಸುಳಿವಿಲ್ಲ... ಎಲ್ಲಿ ಅವಿತು ಕಣ್ಣಾಮುಚ್ಚಾಲೆ ಆಡುತಿಹನೆಂದು.ಮರದ ಹೂವುಗಳೆಲ್ಲಾ ಉದುರಿ
ಬೀಳುತಿದೆ ನಲ್ಲನಿನಿದುಟಿಯಲಿನ ನಗುವ ಕಂಡು,
ಕೆನ್ನೆ ಕದಪುಗಳೆಲ್ಲ ನಾಚುತಿರೆ, ಹತ್ತಿರ ಬಂದು ಹೂಮಾಲೆ
ತಂದು ಕೊರಳಿಗೆ ಹಾಕಿದ ಬಾಳಿಗೆ ಬರುವೆಯಾ...ಎಂದು?
ಓ.."ಕಾಡಕುಸುಮ"ವೇ ಎನುತ . ಕಂಗಳಲಿ
ಪ್ರೀತಿಗೈಯುತ ಕೇಳುತಿಹನು..!!

ಆಶ್ಚರ್ಯಗೊಂಡು ಅತಿತ್ತ ಸರಿಯುತ, ಮುಗಿಲ
ಚಂದ್ರನ ನೋಡುತ
ಮುಗುದೆ ಮರವ ಕೇಳುತಿರೆ ಯಾರಿವನೆಂದು..?
ಕಾಡಿನ ರಾಜ "ದೀಪೇಂದ್ರ" ನೆಂದು ಮಾರ್ಧನಿಸಿತು
ವನಸುಮವೆಲ್ಲಾ..!
"ಕಾಡ ಕುಸುಮ ಕಾಡೊಡತಿಯಾದಳು ದೀಪೇಂದ್ರನ"
ವರಿಸುತ... ಕಾಡಲೆ ನೆಲೆಸಿದಳು..!!
ಬದುಕ ಭಾಗ್ಯವ ನೆನೆದು ನಗುತ ನಗುತ ಸಾಗಿದರು..!!

🙈ಸುಮನ್ ಹೆಚ್ ಸಿ❤️