...

6 views

ಅಭಿಮಾನದ ದೊರೆ
ಸಾಲಿಗೊಂದು ಸುಂದರ ಕವನ ರಚನೆ

ಸಾಲು : ಹೃದಯ ವೀಣೆಯ ತಂತಿ ಮೀಟಲು

ಶೀರ್ಷಿಕೆ: ಅಭಿಮಾನದ ದೊರೆ
~~~~~~~~~~~~~~~~~~~~~~~
ಹೃದಯ ವೀಣೆಯ ತಂತಿ ಮೀಟಲು
ಪ್ರೀತಿಯ ಪ್ರೇಮಿಯಾಗಿ ಬಂದನು ನನ್ನವನು
ಮಧುರ ಸ್ವರಗಳ ಇಂಪಾಗಿ ಹಾಡಲು
ಮನದೊಳಗೆ ಸದ್ದಿಲ್ಲದೆ ಸೇರಿಕೊಂಡನು//

ಮನಸ್ಸಿನ ಭಾವಕ್ಕೆ ತಾಳ ಹಾಕಲು
ಅಭಿಮಾನದ ದೊರೆಯಾಗಿ ಆಗಮಿಸಿದನು
ಮನದ ಬಯಕೆಗಳ ಈಡೇರಿಸಲು ಗುಣವಂತನಾಗಿ ಬಂದು ಕೈ ಹಿಡಿದನು//

ಕಷ್ಟ ಸುಖಗಳ ಹಂಚಿಕೊಳ್ಳಲು
ಹೊಂದಾಣಿಕೆ ಎಂಬ ಅಸ್ತ್ರ ಹಿಡಿದನು
ನೆಮ್ಮದಿಯ ಬಾಳನ್ನು ಕರುಣಿಸಲು ಸ್ವಾಭಿಮಾನಿಯಾಗಿ ದನಿವಿಲ್ಲದೆ ದುಡಿದನು//

ಸಂಸಾರವೆಂಬ ಸಿಹಿ ಕಡಲಲ್ಲಿ ತೇಲಲು
ಕಾಳಜಿ, ಒಲವಿನ ಅರಮನೆಯ ಕಟ್ಟಿದನು
ಸದಾ ಮನೆ, ಮನದಲ್ಲಿ ಸಂತಸ ತುಂಬಲು
ಮೊಗದ ತುಂಬ ನಗುವ ಧಾರೆಯೆರೆದನು//

ನನ್ನ ಕಣ್ಣೆಂಬ ಜಲಪಾತದಲ್ಲಿ ನನ್ನವನಿರಲು
ಆನಂದ ಭಾಷ್ಪಕ್ಕೆ ಕಾರಣನೇ ಅವನು
ದುಃಖದಲ್ಲೂ, ಖುಷಿಯಲ್ಲೂ ಅವನಿರಲು
ನಮ್ಮಿಬ್ಬರ ಬಾಳಾಯ್ತು ಸವಿ ಜೇನು//