...

5 views

ಮಳೆ
ಮಯ್ಯಿಗೆ ಮುತ್ತಿಟ್ಟ ಮಳೆ
ಮನಕೆ ಮುದ ನೀಡಿದೆ.
ಕಾಡುವ ಮಳೆ ಹನಿ
ಹಾಡಲು ಅದು ಹೇಳಿದೆ...

ಹನಿಯ ತಾಳಕೆ ನೆಲವಿದು
ಕುಣಿದು ಮೇಳ ಕಟ್ಟಿದೆ
ಸುರಿವ ಸೋನೆ ಹನಿಯಿದು
ನೂರು ನೆನಪು ಸುರಿದಿದೆ..

ಮಳೆ ಮಳೆ ಈಮಳೆ
ಏನೋ ಕಳೆಯ ತಂದಿದೆ...
ನಲಿವ ಮನಕೆ ಈಮಳೆ
ಹಗಲು ಕನಸು ಕಟ್ಟಿದೆ...

ಸುರಿವ ತುಂತುರು ಹನಿಯಲಿ
ತೇಲಿ ಬರುತಿದೆ ಮೆಲ್ಲನೆ
ಮರೆತು ಹೋದ ಮನದಲಿ
ನೆನಪು ಹಕ್ಕಿ ಕುಳಿತಿದೆ....

ಮಳೆಹನಿಯಲಿ ಮತ್ತೆ ಮತ್ತೆ
ನಲಿವ ಮನಸು ನನಗೆಂದಿದೆ
ಆ ಬಾಲ್ಯ ಆ ಜೀವ
ಮತ್ತೇ ಬಾ ಎಂದಿದೆ...